ನವದೆಹಲಿ: ತಾಯಿ ಹಾಗೂ ಸಹೋದರಿಯರನ್ನು ತಂದೆ ಹೊಡೆದಿದಕ್ಕೆ 16 ವರ್ಷದ ಹುಡುಗ ತನ್ನ ತಂದೆಯನ್ನೇ ಚಾಕು ಇರಿದು ಕೊಂದ ಘಟನೆ ನಗರದ ಸುಲ್ತಾನ್ಪುರ್ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
40 ವರ್ಷದ ವ್ಯಕ್ತಿ ಮೃತ ದುರ್ದೈವಿ. ಆರೋಪಿಯ ತಂದೆ ಕೂಲಿ ಕೆಸಲ ಮಾಡುತ್ತಿದ್ದ ಹಾಗೂ ತಾಯಿ ಶೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ತನ್ನ ತಂದೆ ದಿನ ಮನೆಗೆ ಕುಡಿದು ಬಂದು ತನ್ನ ತಾಯಿ ಹಾಗೂ ಸಹೋದರಿಯರಿಗೆ ಹೊಡೆದು ಹಿಂಸೆ ಕೊಡುತ್ತಿದ್ದದನ್ನು ನೋಡಿ ಆರೋಪಿ ಬೇಸತ್ತು ಹೋಗಿದ್ದ. ಈ ಹಿಂಸೆಯನ್ನು ತಡೆಯಲಾಗದೇ ಮಗ ತಂದೆಗೆ ಎರಡು ಬಾರಿ ಚಾಕು ಇರಿದು ಸಾಯಿಸಿದ್ದಾನೆ.
ಘಟನೆ ಕುರಿತು ತಿಳಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ, ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಾಕು ಇರಿತದಿಂದ ಎದೆಗೆ ಗಂಭೀರ ಗಾಯವಾಗಿದ್ದ ಪರಿಣಾಮ ಆರೋಪಿಯ ತಂದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.
ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews