ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನಿಂದಲೇ ಅತ್ತೆ ಕೊಲೆಯಾದ ಘಟನೆ ಕೆಂಗೇರಿಯ ನಾಗದೇವನಹಳ್ಳಿಯಲ್ಲಿ (Nagadevanahalli) ನಡೆದಿದೆ. ಏಳಲ್ ಅರಸಿ (48) ಕೊಲೆಯಾದ ಮಹಿಳೆ.
Advertisement
ಆರೋಪಿ ದಿವಾಕರ ಅತ್ತೆಯನ್ನು ಕೊಲೆಗೈದಿದ್ದು, ಇವರ ನಡುವಿನ ಕೌಟುಂಬಿಕ ಕಲಹ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ದಿವಾಕರನ ಹೆಂಡತಿ ತನ್ನ ಮಗುವಿನೊಂದಿಗೆ ತವರು ಮನೆಗೆ ಬಂದಿದ್ದಳು. ಆದರೆ ದಿವಾಕರ ಯಾರಿಗೂ ತಿಳಿಯದಂತೆ ಬಂದು ಮಗುವನ್ನು ಕರೆದುಕೊಂಡು ಹೋಗಿದ್ದ. ಮಗು ಕಾಣಸದೆ ಕಂಗಾಲಾದ ಏಳಲ್ ಅರಸಿ ಹಾಗೂ ಆಕೆಯ ಮಗಳು ಮಗುವನ್ನು ಹುಡುಕಾಡಿದ್ದಾರೆ. ಇದನ್ನೂ ಓದಿ: ವೃದ್ಧರಿಗೆ ಸಹಕರಿಸುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿ ಬಂಧನ
Advertisement
Advertisement
ಇತ್ತ ಮಗು ಆರೋಪಿಯ ಬಳಿ ಇರುವುದನ್ನು ತಿಳಿದು ವಾಪಸ್ ಕಳಿಸುವಂತೆ ಕೇಳಿಕೊಂಡಿದ್ದರು. ಆದರೆ ದಿವಾಕರ ಮಗುವನ್ನು ವಾಪಸ್ ಕಳಿಸಲು ಒಪ್ಪದೆ ಗಲಾಟೆ ಮಾಡಿದ್ದಾನೆ. ಜಗಳ ತಾರಕ್ಕೇರಿ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
Advertisement
ಕೆಂಗೇರಿ (Kengeri) ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಮೀನು ಮೃತಪಟ್ಟಿದ್ದಕ್ಕೆ ಮನನೊಂದು 13ರ ಬಾಲಕ ಆತ್ಮಹತ್ಯೆ
The point of view of your article has taught me a lot, and I already know how to improve the paper on gate.oi, thank you. https://www.gate.io/tr/signup/XwNAU