ಕ್ಯಾನ್ಸರ್‌ನಿಂದ ಗುಣಮುಖರಾದ ತಾಯಿಗೆ ಮರು ಮದುವೆ ಮಾಡಿಸಿದ ಮಗ

Public TV
1 Min Read
cancer survivor mother

ಮುಂಬೈ: ಕ್ಯಾನ್ಸರ್‌ನಿಂದ ನೊಂದಿದ್ದ ತಾಯಿಗೆ ಪುತ್ರ ಮರು ಮದುವೆ ಮಾಡಿದ್ದಾರೆ. ಅನಾರೋಗ್ಯದಿಂದ ನೋವನ್ನು ಅನುಭವಿಸಿದ್ದ ತಾಯಿಗೆ ಜೀವನೋತ್ಸಾಹ ಮೂಡಿಸಲು ಮಾಡಿದ ಈ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

wedding

ಫೆಬ್ರವರಿ 14 ರಂದು ಮುಂಬೈನಲ್ಲಿ ಮದುವೆ ನಡೆದಿದೆ. ತಾಯಿ ಮದುವೆ ಕುರಿತಾಗಿ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿರುವ ಜಿಮೀತ್ ಗಾಂಧಿ ತನ್ನ ತಾಯಿ ನೋವಿನ ಕ್ಷಣಗಳು ಮತ್ತು ಹೊಸ ಭರವಸೆಯಿಂದ ಆಗಿರುವ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಶುಭ ಹಾರೈಸುತ್ತಿದ್ದಾರೆ.

wedding

ನನ್ನ ತಾಯಿ 44 ವರ್ಷದವರಾಗಿದ್ದಾಗ (2013)ರಲ್ಲಿ ಪತಿಯನ್ನು ಕಳೆದುಕೊಂಡರು. 2019ರ ವೇಳೆ 3 ನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕೀಮೋಥೆರಪಿಗೆ ಒಳಗಾದರು. 2 ವರ್ಷಗಳ ನಂತರ ಚೇತರಿಸಿಕೊಂಡರು. ನಂತರ ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಹೆಚ್ಚಿನ ಸಮಯ, ನಾವು ಬೇರೆ ಕಡೆ ನಮ್ಮ ವೃತ್ತಿಯನ್ನು ಮುಂದುವರಿಸಿದ್ದರಿಂದ ಅವರು ಭಾರತದಲ್ಲಿ ಒಬ್ಬಂಟಿಯಾಗಿದ್ದರು. ಅವರ ಜೀವನದಲ್ಲಿ ಉತ್ಸಾಹ ಇರಲಿಲ್ಲ. ನಂತರ ಅವರು 52ನೇ ವಯಸ್ಸಿಗೆ ತಾಯಿ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಮದುವೆಯಾದರು. ಈ ಮೂಲಕವಾಗಿ ಭಾರತದಲ್ಲಿರುವ ಕಳಂಕ, ಎಲ್ಲಾ ನಿಷೇಧಗಳನ್ನು ಮುರಿದು ಜೀವನವನ್ನು ಕಟ್ಟಿಕೊಂಡಿದ್ದಾರೆ.

ನನ್ನ ತಾಯಿ, ಹೋರಾಟಗಾರ್ತಿಯಾಗಿದ್ದಾರೆ. ಭಾರತದಲ್ಲಿ ನನ್ನ ತಲೆಮಾರಿನ ಎಲ್ಲಾ ಜನರಿಗೆ ನೀವು ಒಬ್ಬ ಪೋಷಕರನ್ನು ಹೊಂದಿದ್ದರೆ, ಒಡನಾಟವನ್ನು ಕಂಡುಕೊಳ್ಳುವ ಅವರ ನಿರ್ಧಾರವನ್ನು ದಯವಿಟ್ಟು ಬೆಂಬಲಿಸಿ ಪ್ರೀತಿ ನೀಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *