ಮುಂಬೈ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ವಿಚಾರಣೆ ವೇಳೆ ತಿಳಿಸಿದೆ.
ಇತ್ತೀಚೆಗೆ ಔರಂಗಾಬಾದ್‍ನ ಬಾಂಬೆ ಹೈಕೋರ್ಟ್ ಪೀಠವು ಕೊಲ್ಲಾಪುರ ಮತ್ತು ಶಿರಡಿ ದೇವಾಲಯದ ಪೂಜೆ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಶಿಕ್ಷೆ ಬಗ್ಗೆ ವಿಚಾರಣೆ ಮಾಡಿದೆ. ಈ ವೇಳೆ ಅಪ್ಪ ಕೇವಲ ಗದರಿ, ಕೆಟ್ಟ ಮಾತುಗಳನ್ನು ಆಡಿದರೆ, ಮಗ ಅಪ್ಪನನ್ನೇ ಕೊಲ್ಲಲು ಪ್ರಚೋದನೆ ತೆಗೆದುಕೊಳ್ಳುವಂತಿಲ್ಲ ಎಂದು ತಿಳಿಸಿದೆ ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್
Advertisement
ಕ್ಷುಲ್ಲಕ ಕಾರಣಕ್ಕೆ ಅಪ್ಪನನ್ನು ಮಗ ಕೊಂದ ಎಂಬ ಕಾರಣಕ್ಕೆ ಕೆಳ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಕೊಲೆ ಮಾಡಿದ ವ್ಯಕ್ತಿಯ ವಾದವನ್ನು ಆಲಿಸಿದ ಹೈಕೋರ್ಟ್ ಈ ಕುರಿತು ವಿಚಾರಣೆ ನಡೆಸಿದೆ. ನ್ಯಾಯಮೂರ್ತಿಗಳಾದ ವಿಶ್ವಾಸ್ ಜಾಧವ್ ಮತ್ತು ಸಂದೀಪ್ ಕುಮಾರ್ ಮೋರೆ ಅವರ ಪೀಠವು 2014 ರ ಡಿಸೆಂಬರ್‍ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ಉಸ್ಮಾನಾಬಾದ್‍ನ ನಿವಾಸಿ ನೇತಾಜಿ ಟೆಲಿ(29) ಅವರು ಸಲ್ಲಿಸಿದ ಮನವಿಯನ್ನು ಆಲಿಸಿದ್ದು, ನಂತರ ಹೈಕೋರ್ಟ್ ಈ ರೀತಿಯ ಹೇಳಿಕೆ ನೀಡಿದೆ.
Advertisement
Advertisement
ಏನಿದು ಪ್ರಕರಣ?
ನೇತಾಜಿ ಟೆಲಿ ಕೊಲ್ಲಾಪುರ ಮತ್ತು ಶಿರಡಿ ದೇವಾಲಯಗಳಲ್ಲಿ ಅರ್ಚಕನಾಗಿದ್ದ. ಆದರೆ ಆತನ ತಂದೆಗೆ ಮಗ ಬೇರೆ ಕೆಲಸ ಮಾಡಬೇಕು ಎಂದು ಬಯಸಿದ್ದನು. ಡಿಸೆಂಬರ್ 2013 ರಲ್ಲಿ, ಈ ವಿಚಾರವಾಗಿಯೇ ನೇತಾಜಿ ತಂದೆ ಆತನನ್ನು ಗದರಿಸಿದ್ದು, ಬೇರೆ ಕೆಲಸವನ್ನು ಮಾಡದಿದ್ದರೆ ಮನೆಗೆ ಬರಬೇಡ ಎಂದು ಕೇಳಿದ್ದನು. ಇದರಿಂದ ಕೋಪಗೊಂಡ ನೇತಾಜಿ ತಂದೆಗೆ ಕಪಾಳಮೋಕ್ಷ ಮಾಡಿದ್ದಾನೆ. ಅದನ್ನು ಪ್ರಶ್ನಿಸಿದಾಗ ತಂದೆಯನ್ನು ನೇತಾಜಿ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಆ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆ ನೇತಾಜಿಯನ್ನು ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದರು. ಇದನ್ನೂ ಓದಿ: ಕೈ ನಾಯಕರಿಗೊಂದು ಉದ್ಯೋಗ ಬೇಕಿದೆ, ಅದಕ್ಕೆ ಇಲ್ಲಸಲ್ಲದ ಮಾತುಗಳನ್ನಾಡ್ತಿದ್ದಾರೆ: ಮುನಿರತ್ನ
Advertisement
ನೇತಾಜಿ ವಿಚಾರಣೆಯು ನ್ಯಾಯಮೂರ್ತಿ ಜಾಧವ್ ನೇತೃತ್ವದಲ್ಲಿ ನಡೆದಿದ್ದು, ಈ ವೇಳೆ ನನ್ನ ತಂದೆ ನನ್ನ ಮೇಲೆ ಗದರಿದ್ದರಿಂದ ಇದ್ದಕ್ಕಿದ್ದಂತೆ ಕೋಪ ಬಂದು ಈ ಕೃತ್ಯ ಮಾಡಿದ್ದೇನೆ ಎಂದು ವಿವರಿಸಿದ್ದಾನೆ. ಬೇಕೆಂದು ಕೊಲೆ ಮಾಡಿಲ್ಲ ಎಂದು ತಿಳಿಸಿದ್ದನು.