ಮುಂಬೈ: ಪೋಷಕರು ಬದುಕಿರುವಾಗಲೇ ಅವರ ಒಡೆತನದ ಆಸ್ತಿಯ ಮೇಲೆ ಮಗ ಹಕ್ಕು ಸಾಧಿಸಲು ಅಥವಾ ಲಾಭಾಂಶ ಪಡೆಯಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ಸೋನಿಯಾ ಖಾನ್ ಎಂಬವರು ದೀರ್ಘ ಕಾಲದಿಂದ ಹಾಸಿಗೆ ಹಿಡಿದಿರುವ ತನ್ನ ಪತಿಯ ಒಡೆತನದ ಎಲ್ಲ ಆಸ್ತಿಗಳಿಗೆ ಅವರನ್ನು ಕಾನೂನುಬದ್ಧ ಹಕ್ಕುದಾರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. ಇದನ್ನೂ ಓದಿ: ಭಗವಂತ್ ಮಾನ್ ಸಂಪುಟದ ಸಚಿವರು ಕೆಲಸ ಮಾಡದಿದ್ರೆ ತೆಗೆಯುವಂತೆ ಜನರೇ ಒತ್ತಾಯಿಸಬಹುದು: ಕೇಜ್ರಿವಾಲ್
Advertisement
ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿದ್ದ ಅವರ ಮಗ ಆಸಿಫ್ ಖಾನ್ ತಾನು ತನ್ನ ತಂದೆಯ ವಾಸ್ತವಿಕ ರಕ್ಷಕ ಎಂದು ಹೇಳಿಕೊಂಡಿದ್ದರು. ಪೋಷಕರು ಜೀವಂತವಾಗಿ ಇದ್ದರೂ ಅವರ ಆಸ್ತಿಯನ್ನು ಹಂಚಿಕೊಂಡು (ಎರಡು ಫ್ಲಾಟ್) ಹಂಚಿಕೊಂಡು ಕಾನೂನುಬದ್ಧ ಹಕ್ಕು ಇದೆ ಎಂದು ಅವರು ವಾದಿಸಿದ್ದರು. ಆದರೆ ಈ ವಾದ ಆಧಾರ ರಹಿತ ಮತ್ತು ಅತಾರ್ಕಿಕ ಎಂದು ನ್ಯಾಯಮೂರ್ತಿ ಗೌತಮ್ ಪಟೇಲ್ ಮತ್ತು ಮಾಧವ್ ಜಾಮದಾರ್ ಅವರಿದ್ದ ಪೀಠ ತಿಳಿಸಿತು.
Advertisement
Advertisement
ಉತ್ತರಾಧಿಕಾರದ ಕಾನೂನಿನ ಅಡಿಯಲ್ಲಿ ಪೋಷಕರು ಜೀವಂತವಾಗಿರುವವರೆಗೆ ಪೋಷಕರ ಆಸ್ತಿಯಲ್ಲಿ ಹಕ್ಕು ಅಥವಾ ಒಡೆತನ ಪಡೆಯಲು ಯಾವುದೇ ಸಮುದಾಯಕ್ಕೆ ಸೇರಿದ ಮಗನಿಗೂ ಅವಕಾಶವಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಸಿಎಂಗೆ ಒತ್ತಾಯಿಸುವೆ: ಬಿಎಸ್‍ವೈ
Advertisement
ಆಸಿಫ್‌ಗೆ ತನ್ನ ತಂದೆಯ ಫ್ಲಾಟ್‌ಗಳ ಮೇಲೆ ಯಾವುದೇ ಹಕ್ಕು ಇಲ್ಲ. ತನ್ನ ತಂದೆ ಬಗ್ಗೆ ಕಾಳಜಿ ವಹಿಸಿದ್ದಾನೆಂದು ಸಾಬೀತುಪಡಿಸುವ ಯಾವುದೇ ಅಂಶವೂ ಆತನ ಬಳಿ ಇಲ್ಲ. ಅಲ್ಲದೆ, ಆತ ತನ್ನ ತಾಯಿಗೆ ಪರ್ಯಾಯ ಪರಿಹಾರವಿದೆ ಎಂಬ ವಾದವನ್ನು ನಾವು ತಿಸ್ಕರಿಸುತ್ತೇವೆ. ಅವರ ವಾದವೇ ಸಂಪೂರ್ಣ ಹೃದಯಹೀನ ಮತ್ತು ದುರಾಸೆಯಿಂದ ಕೂಡಿದ ಆಸಿಫ್ ಅವರ ನಿಜವಾದ ಸ್ವಭಾವವನ್ನು ತೋರಿಸುತ್ತದೆ. ಅವರ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದೂ ಪೀಠ ಹೇಳಿದೆ.