ಬೆಂಗಳೂರು: ಶನಿವಾರ ತನ್ನನ್ನು ಪ್ರಶ್ನಿಸಿದ ತಾಯಿಗೆ ಪೊರಕೆಯಿಂದ ಹೊಡೆದು ಮಗನೊಬ್ಬ ಕ್ರೌರ್ಯ ಮೆರೆದಿದ್ದನು. ಈಗ ಮತ್ತೊಬ್ಬ ಮಗ ತಾಯಿಯ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ವಥ್ ನಗರದ ಮನೆಯಲ್ಲಿ ಡಿಸೆಂಬರ್ 6ರ ರಾತ್ರಿ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉತ್ತಮ್‍ಕುಮಾರ್ ಹೆತ್ತ ತಾಯಿ ಭಾರತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪುತ್ರ. ಮಗ ಉತ್ತಮ್‍ಕುಮಾರ್ ಮದ್ಯ ಸೇವಿಸಲು ಹಣ ನೀಡದ್ದಕ್ಕೆ ರೊಚ್ಚಿಗೆದ್ದು ಬೆಂಕಿ ಹಚ್ಚಿ ತಾಯಿಯನ್ನ ಕೊಲ್ಲಲು ಯತ್ನಿಸಿದ್ದಾನೆ.
Advertisement
ಹಣ ನೀಡದ್ದಕ್ಕೆ ತಾಯಿಗೆ ಬೆಂಕಿ ಹಚ್ಚಿ ಉತ್ತಮ್ ಕುಮಾರ್ ಪರಾರಿಯಾಗಿದ್ದಾನೆ. ಇತ್ತ ತಾಯಿ ಭಾರತಿ ಎದೆ, ಹೊಟ್ಟೆ ಭಾಗದಲ್ಲಿ ಸುಟ್ಟ ಗಾಯಗಳಾಗಿತ್ತು. ಕೂಡಲೇ ಭಾರತಿ ಪತಿ, ಪತ್ನಿಯನ್ನು ರಕ್ಷಣೆ ಮಾಡಿ ಹೊಯ್ಸಳ ಪೊಲೀಸರಿಗೆ ಕರೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಕೂಡಲೇ ಘಟನೆ ಸ್ಥಳಕ್ಕೆ ಸಂಜಯ ನಗರದ ಹೊಯ್ಸಳ ಪೊಲೀಸರು ಬಂದು ಸುಟ್ಟಗಾಯಗಳಿಂದ ಬಳಲುತ್ತಿದ್ದ ಭಾರತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ತಾಯಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
Advertisement
ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಆರಂಭವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv