ತುಮಕೂರು: ರೈಲ್ವೆ ಇಲಾಖೆಯಿಂದ ಪರಿಹಾರ ತೆಗೆದುಕೊಳ್ಳಲು ಸಹಿ ಹಾಕದ ಹಿನ್ನೆಲೆ ಚಿಕ್ಕಪ್ಪನ ಮೇಲೆ ಅಣ್ಣನ ಮಗನೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೇಶಪುರ ಗ್ರಾಮದಲ್ಲಿ ನಡೆದಿದೆ.
ವೀರಭದ್ರಯ್ಯ (50) ಹಲ್ಲೆಗೊಳಗಾದ ವ್ಯಕ್ತಿ. ವೀರಭದ್ರಯ್ಯನ ಅಣ್ಣನ ಮಗ ಮಹೇಶ್ ಹಾಗೂ ಆತನ 6 ಜನ ಸಹಚರು ಹಲ್ಲೆ ನಡೆಸಿರುವ ಆರೋಪಿಗಳು. ಶುಕ್ರವಾರ ರಾತ್ರಿ ವೀರಭದ್ರಯ್ಯ ಡೈರಿಗೆ ಹಾಲು ಹಾಕಿ ಬರುವ ವೇಳೆ ಮಹೇಶ್ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ತುಮಕೂರು-ರಾಯದುರ್ಗ ರೈಲ್ವೇ ಯೋಜನೆ ನಡೆಯುತ್ತಿದ್ದ ವೇಳೆ ವೀರಭದ್ರಯ್ಯ ಹಾಗೂ ಅವರ ಅಣ್ಣನಿಗೆ ಸೇರಿದ ಎರಡು ಎಕರೆ ಜಮೀನನ್ನು ರೈಲ್ವೆ ಇಲಾಖೆ ಸ್ವಾಧೀನ ಪಡಿಸಿಕೊಂಡಿತ್ತು. ಈ ಜಮೀನು ವಿಚಾರವಾಗಿ ಪರಿಹಾರ ತೆಗೆದುಕೊಳ್ಳಲು ಕೋರ್ಟ್‍ಗೆ ಅರ್ಜಿ ಹಾಕಲು ಸಹಿ ಹಾಕುವಂತೆ ಒತ್ತಾಯಿಸಿ ವೀರಭದ್ರಯ್ಯನ ಮೇಲೆ ಮಹೇಶ್ ಹಲ್ಲೆ ಮಾಡಿದ್ದಾನೆ.
ಸದ್ಯ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ವೀರಭದ್ರಯ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ವೀರಭದ್ರಯ್ಯರ ಪತ್ನಿ ಶೈಲಜಾ ದೂರು ದಾಖಲಿಸಿದ್ದು, ಆರೋಪಿ ಮಹೇಶ್ ಹಾಗೂ ಆತನ 6 ಮಂದಿ ಸಹಚರರ ಮೇಲೆ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

