Bengaluru CityDistrictsKarnatakaLatestMain Post

ಛೇ..! ಇದೆಂತಾ ದುರ್ದೈವ – ಒಂದೇ ಮನೆಯಲ್ಲಿ ಮಗ, ತಾಯಿ ಇಬ್ಬರಿಗೂ ಹಾರ್ಟ್ ಅಟ್ಯಾಕ್

ಬೆಂಗಳೂರು: ಮಗನಿಗೆ ಹೃದಯಾಘಾತವಾದ ವಿಚಾರ ತಿಳಿದು ತಾಯಿಗೂ ಹೃದಯಾಘಾತವಾಗಿರುವ (Heart Attack) ಮನ ಮಿಡಿಯುವ ಘಟನೆ ಬೆಂಗಳೂರಿನ (Bengaluru) ಕೆಂಗೇರಿ (Kengeri) ಉಪ ನಗರದ ವರಗೇರನಹಳ್ಳಿಯಲ್ಲಿ ನಡೆದಿದೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನವೀನ್ (28) ಖಾಸಗಿ ಆಸ್ಪತ್ರೆಯೊಂದರಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ರಾತ್ರಿ ಆಸ್ಪತ್ರೆಯಲ್ಲಿಯೇ ಹೃದಯಾಘಾತದಿಂದ ನವೀನ್ ಕೊನೆಯುಸಿರೆಳೆದಿದ್ದಾರೆ. ಮಗನ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ತಾಯಿಗೂ ಬೆಳಗಿನ ಜಾವ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ- ಸುಪ್ರೀಂನಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಹಿನ್ನಡೆ

ತಾಯಿ, ಮಗ ಇಬ್ಬರೂ ಒಂದು ದಿನ ಮೃತಪಟ್ಟಿದ್ದು, ನಿಜಕ್ಕೂ ಇದೊಂದು ವಿಪರ್ಯಾಸವೆಂದೇ ಹೇಳಬಹುದು. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವರಗೇರನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಶಾಲಾ ವಾಹನ ಅಪಘಾತ – ಓರ್ವ ಮಹಿಳೆ ಸಾವು

Live Tv

Leave a Reply

Your email address will not be published. Required fields are marked *

Back to top button