ತಂದೆಯ ಜೊತೆ ಸೇರಿ ಹೆತ್ತಮ್ಮನನ್ನೇ ಕೊಂದ ಮಗ

Advertisements

ಹಾಸನ: ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಅಂತಾರೆ. ಆದರೆ ಇಲ್ಲೊಬ್ಬ ಪಾಪಿ ಮಗ ತನ್ನ ತಂದೆಯ ಜೊತೆ ಸೇರಿ ಹೆತ್ತಮ್ಮನಿಗೇ ಚಟ್ಟಕಟ್ಟಿ ಬಿಟ್ಟಿದ್ದಾನೆ. ಘಟನೆ ನೋಡಿದ ಸ್ಥಳೀಯರು, ಛೇ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಯ್ತಲ್ಲಾ ಎಂದು ಮರುಗುತ್ತಿದ್ದಾರೆ.

Advertisements

ಹಾಸನ ಜಿಲ್ಲೆ, ಚೆನ್ನರಾಯಪಟ್ಟಣ ತಾಲೂಕಿನ ಮರನಹಳ್ಳಿ ಗ್ರಾಮದ ನಿವಾಸಿ ಐವತ್ತು ವರ್ಷದ ಸುಶೀಲಮ್ಮ ಮೃತ ದುರ್ದೈವಿ. ಪತಿ ಮಂಜುನಾಥ್ ಹಾಗೂ ಮಗ ಮನೋಜ್ ಒಟ್ಟಾಗಿ ಪ್ರತಿದಿನ ಸುಶೀಲಮ್ಮನ ಜೊತೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದರು. ಅಲ್ಲದೇ ಮಂಜುನಾಥ್‌ಗೆ ಬೇರೆ ಸಂಬಂಧವಿದ್ದ ಹಿನ್ನೆಲೆ ಸುಶೀಲಮ್ಮ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಹೀಗಾಗಿ ಇವರ ಸಹವಾಸವೇ ಬೇಡ ಎಂದು ಸುಶೀಲಮ್ಮ ಗಂಡ ಹಾಗೂ ಮಗನಿಂದ ಬೇರಾಗಿ, ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೆ ಇದೀಗ ಗಂಡ ಹಾಗೂ ಮಗ ಸೇರಿ ಸುಶೀಲಮ್ಮನ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ನಿಧಿಗಳ್ಳರಿಂದ ಐತಿಹಾಸಿಕ ಬೀರೇಶ್ವರ ದೇವರ ವಿಗ್ರಹ ಕಳ್ಳತನ 

Advertisements

ಮಂಜುನಾಥ್ ಹಾಗೂ ಮನೋಜ್ ಸೇರಿ ತನ್ನ ತಾಯಿಯನ್ನು ಉಸಿರುಗಟ್ಟಿಸಿ ಕೊಂದಿರೋದಾಗಿ, ಸ್ವತಃ ಪುತ್ರಿ ಅನುಜಾ ಆರೋಪ ಮಾಡಿ, ಚನ್ನರಾಯಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ತಾಯಿ ನನಗೆ ಕರೆ ಮಾಡಿ ಗಂಡ ಹಾಗೂ ಮಗ ಹೊಡೆಯುತ್ತಿದ್ದಾರೆ ಎಂದು ಅಳಲಾರಂಭಿಸಿದರು.

ಆಗ ಅವರಿಬ್ಬರು ನಿನ್ನನ್ನು ಕೊಲ್ಲುತ್ತೇನೆ ಎಂದು ನನ್ನ ತಾಯಿಗೆ ಹೊಡೆಯುತ್ತಿದ್ದನ್ನು ಫೋನಿನಲ್ಲಿ ನಾನು ಕೇಳಿಸಿಕೊಂಡೆ. ತಕ್ಷಣ ಮನೆಗೆ ಹೋಗಿ ನೋಡುವಷ್ಟರಲ್ಲಿ ನನ್ನ ತಾಯಿ ಮೃತಪಟ್ಟಿದ್ದರು ಎಂದು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಗೋಡಂಬಿಯಾಕಾರದ ಮೊಟ್ಟೆ ಇಟ್ಟ ಕೋಳಿ 

Advertisements

Advertisements
Exit mobile version