ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ದೇಶಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಪತ್ನಿ ಸುನಿತಾ ಕೇಜ್ರಿವಾಲ್ (Sunita Kejriwal) ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದ್ದನ್ನು ಖಂಡಿಸಿ ದೆಹಲಿಯಲ್ಲಿ INDIA ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
Advertisement
मुख्यमंत्री @ArvindKejriwal जी की धर्मपत्नी SMT. @KejriwalSunita जी ने उनकी जेल से दी 6 Guarantees को देश के सामने रखा:
मैं INDIA🇮🇳 की तरफ़ से छह गारंटी देता हूं-
1️⃣पूरे देश मे 24 घंटे बिजली
2️⃣पूरे देश मे गरीबों की बिजली मुफ़्त
3️⃣हर गांव, मोहल्ले में शानदार सरकार स्कूल… pic.twitter.com/bwXWL1aI95
— AAP (@AamAadmiParty) March 31, 2024
Advertisement
ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ (BJP) ಹೇಳುತ್ತಿದೆ. ಕೇಜ್ರಿವಾಲ್ ರಾಜೀನಾಮೆ ನೀಡಬೇಕಾ? ದೇಶಕ್ಕಾಗಿ ಕೇಜ್ರಿವಾಲ್ ಹೋರಾಡುತ್ತಿದ್ದಾರೆ. ಬಹುಶ: ಕೇಜ್ರಿವಾಲ್ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು ಅನಿಸುತ್ತದೆ. ಹೋರಾಟದಲ್ಲಿ ಹುತಾತ್ಮರಾಗಿದ್ದ ಅವರು ಈಗಲೂ ಮತ್ತೆ ಹೋರಾಟ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಎಲ್‌ಕೆ ಅಡ್ವಾಣಿ ನಿವಾಸದಲ್ಲೇ ಭಾರತ ರತ್ನ ಪ್ರದಾನ
Advertisement
Advertisement
ಅರವಿಂದ್ ಕೇಜ್ರಿವಾಲ್ ಬರೆದ ಪತ್ರ ಓದಿದ ಅವರು, ನಾನು ಮತ ಕೇಳುವುದಿಲ್ಲ. ಭಾರತ ಒಂದು ಮಹಾನ್ ದೇಶವಾಗಿದ್ದು ತನ್ನದೇಯಾದ ಸಂಸ್ಕೃತಿ ಇದೆ. ಆದರೂ ಭಾರತದಲ್ಲಿ (India) ಬಡತನ ಯಾಕಿದೆ? ನಾನು ಜೈಲಿನಲ್ಲಿ ಭಾರತ ಮಾತೆಗಾಗಿ ಯೋಚನೆ ಮಾಡುತ್ತೇನೆ. ಭಾರತ ಮಾತೆ ದು:ಖದಲ್ಲಿದ್ದಾಳೆ, ನೋವಿನಲ್ಲಿದ್ದಾಳೆ. ನಾವು ಸೇರಿ 140 ಕೋಟಿ ಜನರ ಹೊಸ ಭಾರತ ಕಟ್ಟೋಣ. ಬಡತನ, ನಿರುದ್ಯೋಗ ಇಲ್ಲದ ದೇಶ ಕಟ್ಟೋಣ. ಒಳ್ಳೆಯ ಶಿಕ್ಷಣ, ವೈದ್ಯಕೀಯ ಸೌಲಭ್ಯ ಸಿಗುವ ದೇಶ ನಿರ್ಮಿಸೋಣ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವ ನಾಯಕನಾಗುವ ದೇಶ ನಿರ್ಮಾಣ ಮಾಡೋಣ. ಆ ದೇಶದಲ್ಲಿ ದ್ವೇಷ ವೈರತ್ವ ಮುಕ್ತವಾಗಿರಲಿದೆ. INDIA ಒಕ್ಕೂಟ ಹೃದಯದಲ್ಲಿದೆ ಎಂದು ಹೇಳಿದರು.
ಬಂದನದಲ್ಲಿರುವ ಕೇಜ್ರಿವಾಲ್ 6 ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಪೂರ್ತಿ ದೇಶದಲ್ಲಿ 24 ಗಂಟೆ ವಿದ್ಯುತ್, ಬಡವರಿಗೆ ವಿದ್ಯುತ್ ಉಚಿತ, ಪ್ರತಿ ಊರಿನಲ್ಲಿ ಒಳ್ಳೆಯ ಶಾಲೆ, ಪ್ರತಿ ನಗರದಲ್ಲಿ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ನಿರ್ಮಿಸಿ ಉಚಿತ ಚಿಕಿತ್ಸೆ, ರೈತರಿಗೆ ಸ್ವಾಮಿನಾಥನ್ ವರದಿ ಅನುಷ್ಠಾನ, ದೆಹಲಿ ಪೂರ್ಣ ರಾಜ್ಯದ ಅಸ್ತಿತ್ವ ನೀಡುವ ಘೋಷಣೆ ಮಾಡಿದ್ದಾರೆ ಎಂದು ಸುನಿತಾ ಕೇಜ್ರಿವಾಲ್ ತಿಳಿಸಿದರು.