ಉಡುಪಿ: ಮಂಡ್ಯ ಲೋಕಸಭಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಈ ನಡುವೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ. ನಾನು ಮಂಡ್ಯಕ್ಕೆ ಹೋಗಿ 6 ದಿನ ಆಯ್ತು ಅಷ್ಟೇ. ಅಲ್ಲಿ ಜೆಡಿಎಸ್ ಕುತಂತ್ರ ಮಾಡುತ್ತಿಲ್ಲ. ಕುತಂತ್ರ ಮಾಡುತ್ತಿರುವವರು ನಮ್ಮ ವಿರೋಧಿಗಳು. ಮಂಡ್ಯದಲ್ಲಿ ಸ್ಟ್ರಾಟಜಿ ಮಾಡಿ ಚುನಾವಣೆ ಮಾಡುವ ಅಗತ್ಯ ಇಲ್ಲ. ಮಂಡ್ಯ ಜಿಲ್ಲೆ ನಮ್ಮ ಹೃದಯ ಇದ್ದಂತೆ. ಅಲ್ಲಿನ ನಾಡಿಮಿಡಿತ ನಮಗೆ ಗೊತ್ತಿದೆ. ಯಾರ ಡ್ರಾಮಾನೂ ಮಂಡ್ಯದಲ್ಲಿ ನಡೆಯುವುದಿಲ್ಲ. ರೈತರು ಸತ್ತಾಗ ಯಾರೂ ಬಂದಿಲ್ಲ. ಕಂಪೌಂಡ್ ಕಟ್ಟಿಸಿದ ಮಾತ್ರಕ್ಕೆ ಅದು ಅಭಿವೃದ್ಧಿ ಆಗಲ್ಲ ಎಂದು ಸುಮಲತಾ ಅಂಬರೀಶ್‍ಗೆ ಸಿಎಂ ಟಾಂಗ್ ನೀಡಿದ್ದಾರೆ.
Advertisement
Advertisement
ಬಳಿಕ ಮಂಡ್ಯದಲ್ಲಿ ನಾನು ನಮ್ಮ ಜೆಡಿಎಸ್ ಕಾರ್ಯಕರ್ತರ ಮೇಲೆ ಡಿಪೆಂಡ್ ಆಗಿದ್ದೇನೆ. ಯಾರ್ ಯಾರು ಏನೇನ್ ಮಾಡ್ತಾರೆ ಗೊತ್ತಿದೆ. ಮೂರು ತಿಂಗಳ ಹಿಂದೆಯಿಂದ ಎಲ್ಲವೂ ನಡೆಯುತ್ತಿದೆ. ಅಂಬರೀಶ್ ದೇಹಕ್ಕೆ ಅಗ್ನಿ ಸ್ಪರ್ಶ ಆದಕೂಡಲೇ ರಾಜಕೀಯ ಆರಂಭವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡಲು ಎಲ್ಲರೂ ಹೊರಟಿದ್ದಾರೆ. ನಾನು ಚೆಲುವರಾಯ ಸ್ವಾಮಿ ಬಗ್ಗೆ ಮಾತೇ ಆಡಿಲ್ಲ. ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ಮಾತನಾಡಿದ್ದೆ. ನಾನು ಚೆಲುವರಾಯಸ್ವಾಮಿ ಬೆನ್ನಿಗೆ ಚೂರಿ ಹಾಕುತ್ತಾರೆ ಅಂದಿಲ್ಲ ಎಂದು ಸಿಎಂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.