ಬೆಂಗಳೂರು: ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕಾಮುಕನೊಬ್ಬ ವಿದೇಶಿ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿರೋ ಘಟನೆ ನಡೆದಿದೆ.
ಮಹಿಳೆಯ ಹಿಂಭಾಗಕ್ಕೆ ಹೊಡೆದು ಓಡಿಹೋಗಲು ಯತ್ನಿಸಿದ್ದ ಯುವಕನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದ್ರು. ನಂತ್ರ ಪೊಲೀಸರು ಆ ಯುವಕನನ್ನು ಮಹಿಳೆ ಬಳಿ ಕರೆದುಕೊಂಡು ಹೋದ್ರು. ಅಲ್ಲದೆ ಮಹಿಳೆಯ ಕಾಲು ಹಿಡಿದು ಕ್ಷಮೆ ಕೇಳುವಂತೆ ಹೇಳಿದ್ರು. ಈ ವೇಳೆ ನಡುರಸ್ತೆಯಲ್ಲೆ ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾನೆ. ಇದನ್ನೂ ಓದಿ: 2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ!
Advertisement
Advertisement
ಇನ್ನು ರಾತ್ರಿ ಹೊಸವರ್ಷಾಚರಣೆ ವೇಳೆ ಮಹಿಳೆಯೊಬ್ಬರಿಗೆ ಕಿಡಿಗೇಡಿಗಳು ಕಾಟ ಕೊಟ್ಟಿದ್ದಾರೆ. ತಿಪ್ಪಸಂದ್ರ ಮೂಲದ ಬೆನಕ ಎಂಬವರು ತಮ್ಮ ಕುಟುಂಬದೊಂದಿಗೆ ಹೊಸವರ್ಷಾಚರಣೆಗೆ ಎಂಜಿ ರೋಡ್‍ಗೆ ಬಂದಿದ್ರು. ಆದ್ರೆ ಈ ವೇಳೆ ಕಾಮುಕರ ಕಾಟದಿಂದ ವಾಪಸ್ ಹೊರಟ್ರು. ವಾಪಸ್ ಹೋಗುವಾಗಲೂ ಕಾಮುಕನೊಬ್ಬ ಯುವತಿಗೆ ಟಚ್ ಮಾಡಿ ಕಿರುಕುಳ ಕೊಟ್ಟಿದ್ದಾನೆ. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಬೆನಕ, ಪೊಲೀಸರು ಬೆಂಗಳೂರು ಸೇಫ್ ಅಂತಾರೆ ಆದ್ರೆ, ಎಲ್ಲಕ್ಕಿಂತ ಹೆಚ್ಚು ಡೇಂಜರ್ ಈ ಬೆಂಗಳೂರು ಅಂತಾ ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ- ಬೆಂಗ್ಳೂರಲ್ಲಿ ಮಾದರಿಯಾದ್ರು ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್
Advertisement
Advertisement
ಹೊಸವರ್ಷದ ಸಂಭ್ರಮಾಚರಣೆ ವೇಳೆ ಕುಡಿದ ಮತ್ತಿನಲ್ಲಿ ಯುವತಿಯರು ಅನುಚಿತವಾಗಿ ವರ್ತಿಸಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿರೋ ಸೋಸಿಯಲ್ ಹೋಟೆಲ್ ಮುಂಭಾಗದಲ್ಲಿ ಯುವತಿಯರು ಅರೆಪ್ರಜ್ಞಾಸ್ಥೆಯಲ್ಲಿ ಕುಡಿದು ಹೆಚ್ಚಾಗಿ ವಾಂತಿ ಮಾಡುತ್ತಿದ್ದಿದ್ದು ಕಂಡು ಬಂತು. ಜೊತೆಗೆ ಸಂಭ್ರಮಾಚರಣೆ ವೇಳೆ ಪೊಲೀಸರ ಬ್ಯಾರಿಕೇಡ್ ಮುರಿತು ಸಾವಿರಾರು ಜನ ಬ್ರಿಗೇಡ್ ರೋಡ್ ಕಡೆಗೆ ನುಗ್ಗಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಬೇಕಾಯ್ತು. ಇದನ್ನೂ ಓದಿ: ಉಡುಪಿಯಲ್ಲಿ ನ್ಯೂ ಇಯರ್ ಪಾರ್ಟಿ ಬಲು ಜೋರು
ಯುವಕನೊಬ್ಬ ಪೊಲೀಸರ ಎದುರಲ್ಲೇ ಯುವತಿಯನ್ನು ಚುಡಾಯಿಸಿದ ಘಟನೆ ಬೆಂಗಳೂರಿನ ಗರುಡಾ ಮಾಲ್ ಬಳಿಯ ನೋ ಲಿಮಿಟ್ಸ್ ಕ್ಲಬ್ ಬಳಿ ನಡೆದಿದೆ. ಈ ವೇಳೆ ಯುವತಿಯನ್ನು ಚುಡಾಯಿಸಿದ ಯುವಕನಿಗೆ ಪಾನಮತ್ತ ಯುವಕನೊಬ್ಬ ಥಳಿಸಿದ್ದಾನೆ. ಎಲ್ಲವೂ ಪೊಲೀಸರ ಎದುರೇ ನಡೆದ್ರೂ ಪೊಲೀಸರು ಸುಮ್ಮನೆ ನೋಡುತ್ತಾ ನಿಂತಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿಯ ಪ್ರಿಯಕರ ಬೆಂಗಳೂರು ಪೊಲೀಸರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.