ಬಂತು ನ್ಯೂ ಇಯರ್‌; ಈ ವರ್ಷ ಹ್ಯಾಪಿಯಾಗಿರಲು ಹೀಗೆ ಮಾಡಿ..

Public TV
4 Min Read
new year 2023.

ನ್ಯೂ ಇಯರ್‌ 2023ನ್ನು (New Year 2023) ಎಲ್ಲರೂ ಬಿಂದಾಸ್‌ ಆಗಿ ವೆಲ್‌ಕಮ್‌ ಮಾಡಿದ್ದಾರೆ. ಹೊಸ ಕನಸು, ಆಸೆ, ಗುರಿಗಳೊಂದಿಗೆ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ. ಕುಟುಂಬದವರು, ಸ್ನೇಹಿತರೊಟ್ಟಿಗೆ ಪ್ರವಾಸ, ಮೋಜು-ಮಸ್ತಿ ಮಾಡುತ್ತಿದ್ದಾರೆ. ಇದು ನ್ಯೂ ಇಯರ್‌ ಆಚರಣೆಯ ಮೊದಲ ದಿನಕ್ಕಷ್ಟೇ ಸೀಮಿತವಾಗಿರುತ್ತೆ. ಮತ್ತೆ ಎಲ್ಲರೂ ಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ.

ಹೊಸ ವರ್ಷ ಸಂಭ್ರಮ ಕೇವಲ ಒಂದು ದಿನಕ್ಕಷ್ಟೇ ಸೀಮಿತ ಆಗಬಾರದು. ಸಂಭ್ರಮ, ಖುಷಿ, ಆನಂದವನ್ನು ವರ್ಷಪೂರ್ತಿ ಇರುವಂತೆ ನೋಡಿಕೊಳ್ಳಬೇಕು. ಹ್ಯಾಪಿಯಾಗಿ ಈ ವರ್ಷವನ್ನು ಕಳೆಯಲು ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಒಂದಷ್ಟು ನಿಯಮಗಳನ್ನು ಅಳವಡಿಸಿಕೊಳ್ಳಿ. ನಾವು ಒಂದಷ್ಟು ಟಿಪ್ಸ್‌ ಕೊಡ್ತೀವಿ. ಪ್ರತಿದಿನ ಹೀಗೆ ಮಾಡಿ ಸದಾ ಹ್ಯಾಪಿಯಾಗಿ ಜೀವನ ನಡೆಸಿ. ಇದನ್ನೂ ಓದಿ: ಹಾಯ್‌ 2023.. ಹೊಸ ವರ್ಷ ನಿನಗೆ ಸುಸ್ವಾಗತ

Sleeping

ನಿದ್ರೆ ಮತ್ತು ಏಳುವ ಸಮಯ ಸರಿ ಮಾಡ್ಕೊಳ್ಳಿ
ಇಲ್ಲಿಯವರೆಗೆ ನೀವು ಸೋಂಬೇರಿಯಂತೆ ಯಾವಾಗಲೋ ಮಲಗುವುದು, ಎಷ್ಟೊತ್ತಿಗೋ ಏಳುವುದು ಮಾಡುತ್ತಿದ್ದರೆ ಇನ್ಮುಂದೆ ಅದನ್ನು ಸರಿಪಡಿಸಿಕೊಳ್ಳಿ. ಹೊಸ ವರ್ಷದಲ್ಲಿ ನಾನು ದಿನಚರಿಯನ್ನು ಸರಿಯಾಗಿ ಮ್ಯಾನೇಜ್‌ ಮಾಡ್ತೀನಿ ಅಂತಾ ಸಂಕಲ್ಪ ಮಾಡಿ. ಆದಷ್ಟು ಬೇಗ ಅಂದರೆ ನಿಗದಿತ ಸಮಯಕ್ಕೆ ಮಲಗಿ ಮತ್ತು ಬೆಳಗ್ಗೆ ಬೇಗನೆ ಏಳುವ ಪ್ರವೃತ್ತಿ ಬೆಳೆಸಿಕೊಳ್ಳಿ. ಇದು ಒಂದು ದಿನಕ್ಕಷ್ಟೇ ಸೀಮಿತ ಆಗಬಾರದು. ನಿತ್ಯ ಇದನ್ನು ಚಾಚೂ ತಪ್ಪದೇ ಪಾಲಿಸಬೇಕು.

ಈ ದಿನ ಏನೇನು ಮಾಡ್ಬೇಕು ಅಂತಾ ಪ್ಲ್ಯಾನ್‌ ಮಾಡಿ
ಈ ದಿನ ನಾನು ಇಂತಿಂಥ ಕೆಲಸ ಮಾಡಬೇಕು ಅಂತಾ ಪ್ಲ್ಯಾನ್‌ ಮಾಡಿಕೊಳ್ಳಿ. ಇದನ್ನು ಕನಿಷ್ಠ 2 ವಾರಗಳವರೆಗೆ ತಪ್ಪದೇ ಪಾಲಿಸಿ. ಆಗ ನೀವೇ ಎಲ್ಲದಕ್ಕೂ ಹೊಂದಿಕೊಳ್ಳುತ್ತೀರಾ. ಆಗ ಪ್ರತಿ ಕೆಲಸವೂ ನಿಮಗೆ ಇನ್ನಷ್ಟು ಸುಲಭ ಹಾಗೂ ಕಡಿಮೆ ಸಮಯದಲ್ಲಿ ಆಗುತ್ತೆ. ಇನ್ಮುಂದೆ ನೀವು ಯಾವುದೇ ಕೆಲಸ ಮಾಡ್ಬೇಕಾದ್ರೂ ಅದಕ್ಕೊಂದು ಯೋಜನೆ ರೂಪಿಸಿಕೊಳ್ಳಿ. ಅದು ನಿಮ್ಮ ಯಶಸ್ಸಿಗೆ ದಾರಿದೀಪವಾಗುತ್ತೆ.

food

ಮನೆಯಲ್ಲೇ ಮಾಡಿದ ಆಹಾರ ಸೇವಿಸಿ
ಹೊಸ ವರ್ಷ ಕೇವಲ ಸಂಭ್ರಮಕ್ಕಷ್ಟೇ ಅಲ್ಲ. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ವರ್ಷ ಆಗಬೇಕು. ಈ ವರ್ಷ ನಾನು ಮನೆಯಲ್ಲೇ ಮಾಡಿದ ಆಹಾರ ಸೇವಿಸುತ್ತೇನೆ. ಸ್ಟ್ರೀಟ್‌ ಫುಡ್‌, ಜಂಕ್‌ ಫುಡ್‌ನ್ನು ಆದಷ್ಟು ಕಡಿಮೆ ಮಾಡುತ್ತೇನೆ ಎಂದು ಶಪಥ ಮಾಡಿ. ಆರೋಗ್ಯದ ಕಡೆಗೂ ಹೆಚ್ಚಿನ ಆದ್ಯತೆ ಕೊಡಿ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

ವ್ಯಾಯಾಮ, ಧ್ಯಾನ ಮಾಡಿ
ವ್ಯಾಯಾಮ ಮಾಡಲು ಹಣ ಕೊಟ್ಟು ಜಿಮ್‌ ಕ್ಲಾಸ್‌ಗೆ ಹೋಗಬೇಕು ಅಂತೇನು ಇಲ್ಲ. ನಿಮ್ಮ ಮನೆಯಲ್ಲೇ ವ್ಯಾಯಾಮ ಮಾಡಿ. ವರ್ಕೌಟ್‌ಗೆ ಮನೆಯಲ್ಲೇ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಕಿರಿಕಿರಿ ಎನಿಸದ, ಪ್ರಶಾಂತವಾದ ಜಾಗ ಅದಾಗಿರಬೇಕು. ದೇಹವನ್ನು ದಂಡಿಸಿದರೆ ಆರೋಗ್ಯ ಚೆನ್ನಾಗಿರುತ್ತೆ. ಹಾಗೆ ಮನಸ್ಸು ಉಲ್ಲಾಸಭರಿತವಾಗಿರುತ್ತೆ. ಧ್ಯಾನ ಮಾಡಿದರೆ ಮನಸ್ಸು ಸದೃಢವಾಗುತ್ತದೆ. ನೀವು ಮಾಡುವ ಕೆಲಸಗಳ ಕಡೆ ಆಸಕ್ತಿ, ಶ್ರದ್ಧೆ ಮೂಡುತ್ತದೆ.

meditation

ಎನ್‌ಜಿಒ ಮೂಲಕ ಸಹಾಯ ಮಾಡಿ
ಜೀವನದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಪ್ರತಿಯೊಬ್ಬರಿಗೂ ಇರಬೇಕು. ಎನ್‌ಜಿಒ ಮೂಲಕ ಸ್ವಯಂಸೇವಕರಾಗಿ ಇತರರಿಗೆ ನೆರವಾಗಬೇಕು. ನಿಜಕ್ಕೂ ಅದು ನಮ್ಮ ಬದುಕಿನ ಸಾರ್ಥಕ ಕ್ಷಣವಾಗುತ್ತೆ.

ಚೆನ್ನಾಗಿ ನೀರು ಕುಡಿಯಿರಿ
ಈ ವರ್ಷ ನಿಮ್ಮ ದೇಹ ನಿರ್ಜಲೀಕರಣದಿಂದ ಅನಾರೋಗ್ಯ ಸಮಸ್ಯೆ ಎದುರಿಸಬಾರದು. ಇದರ ಬಗ್ಗೆಯೂ ನೀವು ಎಚ್ಚರ ವಹಿಸಬೇಕು. ಅದಕ್ಕಾಗಿ ನಿತ್ಯ ನಿಗದಿತ ಪ್ರಮಾಣದಲ್ಲಿ ನೀರನ್ನು ಸೇವಿಸಿ. ಸರಿಯಾಗಿ ನೀರನ್ನು ಸೇವಿಸದೇ ಆರೋಗ್ಯ ಹಾಳುಮಾಡಿಕೊಳ್ಳಬೇಡಿ.

water

ಪುಸ್ತಕ ಓದಿ
ಆಸಕ್ತಿ ಕ್ಷೇತ್ರದ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಲು ಪುಸ್ತಕ ಓದುವುದು ಬಹಳ ಮುಖ್ಯ. ಎಷ್ಟೋ ಜನರಿಗೆ ಪುಸ್ತಕ ಓದಲು ಆಸಕ್ತಿಯೇ ಇರುವುದಿಲ್ಲ. ಅಂತಹವರು ನಿತ್ಯ ಒಂದು ಪುಟವನ್ನಷ್ಟೇ ಓದಿ. ಹಾಗೆಯೇ ನಿಧಾನವಾಗಿ ಪುಸ್ತಕ ಓದಿನ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಿ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

ಮನೆ, ನಿಮ್ಮ ಕೊಠಡಿಯನ್ನು ಶುಚಿಯಾಗಿಡಿ
ಮನೆ ಯಾವಾಗಲು ಶುಚಿಯಾಗಿರಬೇಕು. ಆಗ ಮನಸ್ಸು ಪ್ರಫುಲ್ಲವಾಗಿರುತ್ತೆ. ಸಂಸಾರಿಗಳ ಮನೆ ಯಾವಾಗಲೂ ಅಚ್ಚುಕಟ್ಟಾಗಿರುತ್ತೆ. ಆದರೆ ಬ್ಯಾಚುಲರ್‌ಗಳ ಮನೆಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಅವುಗಳನ್ನು ನಿಗದಿತ ಸ್ಥಳಗಳಲ್ಲಿ ಇಡಿ. ಕೊಠಡಿಗಳನ್ನು ಶುಚಿಯಾಗಿಟ್ಟುಕೊಳ್ಳಿ.

couple house cleaning

ಕುಟುಂಬ ಸದಸ್ಯರು, ಸ್ನೇಹಿತರನ್ನು ಭೇಟಿಯಾಗಿ
ಕುಟುಂಬದ ಸದಸ್ಯರು, ಸ್ನೇಹಿತರನ್ನು ಭೇಟಿಯಾಗಿ ಅವರೊಟ್ಟಿಗೆ ಹೊಸ ವರ್ಷದ ಸಂಭ್ರಮ ಆಚರಿಸಿ. ಎಷ್ಟೋ ಮಂದಿ ಕೆಲಸದ ನಿಮಿತ್ತ ದೂರದ ಊರುಗಳಿಗೆ ಕೆಲಸಕ್ಕೆ ಹೋಗಿರುತ್ತಾರೆ. ಕುಟುಂಬದವರನ್ನು ಮಿಸ್‌ ಮಾಡಿಕೊಂಡಿರುವವರು ತಿಂಗಳಿಗೆ ಒಮ್ಮೆಯಾದರೂ ಭೇಟಿಯಾಗಿ. ಸ್ನೇಹಿತರೊಟ್ಟಿಗೆ ಕಾಲ ಕಳೆಯಿರಿ. ಈ ವರ್ಷವನ್ನು ಎಂಜಾಯ್‌ ಮಾಡಿ.

Happy Newyear 1

ಹೊರಗಡೆ ಸುತ್ತಾಡಿ
ನಿಮ್ಮ ದಿನಚರಿ ಮನೆಗಷ್ಟೇ ಸೀಮಿತ ಆಗಬಾರದು. ಹೊರಗಡೆ ಸುತ್ತಾಡಿ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ಬುಕ್‌ಸ್ಟಾಲ್‌ಗಳು ಭೇಟಿ ನೀಡಿ. ಥಿಯೇಟರ್‌ಗೆ ಹೋಗಿ ಒಳ್ಳೆಯ ಸಿನಿಮಾ ವೀಕ್ಷಿಸಿ. ಮ್ಯೂಸಿಯಂಗಳಿಗೆ ಹೋಗಿ. ಆ ದಿನವನ್ನು ಎಂಜಾಯ್‌ ಮಾಡಿ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

ನಿಮ್ಮನ್ನು ನೀವು ಪ್ರೀತಿ
ಯಾರು ತನ್ನನ್ನು ತಾನು ಹೆಚ್ಚು ಪ್ರೀತಿಸುತ್ತಾರೋ ಅವರು ಇತರರ ಬಗ್ಗೆಯೂ ಪ್ರೀತಿ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ. ಮೊದಲು ನಿಮ್ಮನ್ನು ನೀವು ಪ್ರೀತಿಸಿ. ನಿಮ್ಮ ಬಗ್ಗೆಯೇ ಕೇರ್‌ ಮಾಡಿ. ನಿಮ್ಮ ಬಗ್ಗೆ ನಿಮಗೆ ಪ್ರೀತಿ, ಕಾಳಜಿ ಇಲ್ಲ ಅನ್ನೋದಾದ್ರೆ ಬೇರೆಯವರ ಬಗ್ಗೆಯೂ ಅದೇ ಭಾವನೆ ಇರುತ್ತೆ.

Live Tv
[brid partner=56869869 player=32851 video=960834 autoplay=true]

Share This Article