ಮಂಗಳೂರು: ಸಮಾಜದಲ್ಲಿ ಶಾಂತಿ ಕದಡಿ ರಾಜಕೀಯ ಲಾಭ ಪಡೆಯೋದು ನಡೆಯುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
Advertisement
ರಾಜ್ಯದಲ್ಲಿ ಹಿಜಬ್-ಕೇಸರಿ ಶಾಲು ವಿವಾದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿವಾದ ಹೇಗೆ, ಎಲ್ಲಿಂದ, ಯಾಕೆ ಪ್ರಾರಂಭ ಆಯ್ತು ಎಂದು ಹೇಳೋದು ಕಷ್ಟ. ಒಬ್ಬೊಬ್ರು ಒಂದೊಂದು ರೀತಿ ಹೇಳ್ತಿದ್ದಾರೆ. ಎರಡು ಪ್ರಮುಖ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡ್ತಿದೆ. ನಾನು ಯಾರ ಮೇಲೂ ಅಪಾದನೆ ಮಾಡಲ್ಲ ಎಂದರು. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು
Advertisement
ಒಂದಲ್ಲ ಒಂದು ಸಮಸ್ಯೆಯನ್ನು ಉದ್ಬವ ಮಾಡೋದಕ್ಕೆ ಕಾಯ್ತಿರ್ತಾರೆ. ಇದರಿಂದ ರಾಜಕೀಯ ಲಾಭ ಪಡಿಬೇಕು ಎಂದು ಲೆಕ್ಕಾಚಾರ ಹಾಕ್ತಾರೆ. ನಾನು ಧರ್ಮದ ಆಧಾರದಲ್ಲಿ ವೈಷಮ್ಯ ಸೃಷ್ಟಿ ಮಾಡಿ ಎಂದು ರಾಜಕೀಯ ಲಾಭ ಪಡೆದಿಲ್ಲ. ಸಮಾಜದಲ್ಲಿ ಶಾಂತಿ ಕದಡೋದು ರಾಜಕೀಯ ಲಾಭ ಪಡೆಯೋದು ನಡಿಯುತ್ತಿದೆ. ಕರಾವಳಿ ಭಾಗದಲ್ಲಿ ಇದು ಹೆಚ್ಚಾಗುತ್ತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಎಚ್.ಡಿ.ಕುಮಾರಸ್ವಾಮಿ ಕಣ್ಣು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರು ಯಾಕೆ ಸ್ಪರ್ಧೆ ಮಾಡ್ತಾರೆ. ಹಲವಾರು ಭಾವನೆಗಳು ಬರ್ತಾ ಇದೆ ಅಷ್ಟೇ. ಅವರು ಪಾರ್ಟಿಯಲ್ಲಿ ಮುಖ್ಯ ನಾಯಕನ ಸ್ಥಾನದಲ್ಲಿ ಇದ್ದಾರೆ. ಅವರಿಗೆ ರಾಜ್ಯದಲ್ಲಿ ಎಲ್ಲಿ ಬೇಕಾದರೂ ನಿಲ್ಲಬಹುದು. ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ತಿರಿ ಎಂದು ಹೇಳುವುದಕ್ಕೆ ಆಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಕ್ಕಳ ಜೊತೆ ಕೆರೆಗೆ ಹಾರಿದ ತಾಯಿ – ಶವವಾಗಿ ಪತ್ತೆ!
ಕುಮಾರಸ್ವಾಮಿ ರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ. ಎಲ್ಲಿ ನಿಲ್ಲುತ್ತಾರೆ ಅಂತಾ ಗೊತ್ತಿಲ್ಲ. ಆದ್ರೆ ರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ. ಸುಮ್ಮನೇ ಒಬ್ಬರಿಗೊಬ್ಬರು ಮಾತನಾಡುವಾಗ ಚರ್ಚೆಯಾಗ್ತಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.