ಲಕ್ನೋ: ‘ಹಸು’ ಮತ್ತು ‘ಓಂ’ ನಂತಹ ಪದಗಳನ್ನು ಕೇಳಿದ ಕೆಲವರು ಆಘಾತಕ್ಕೊಳಗಾಗುತ್ತಾರೆ. ಇದು ನಮ್ಮ ದೇಶದಲ್ಲಿ ದುರದೃಷ್ಟಕರ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇಂದು ಉತ್ತರ ಪ್ರದೇಶದ ಮಥುರಾದಲ್ಲಿ ನಡೆದ ಜಾನುವಾರುಗಳಿಗೆ ರೋಗ ತಡೆಗಟ್ಟುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಗೋವು ಮತ್ತು ಓಂ ಪದಗಳನ್ನು ಕೇಳಿದರೆ ಕೆಲವರಿಗೆ ಆಗುವುದಿಲ್ಲ. ಈ ಪದಗಳನ್ನು ಕೇಳಿದರೆ ಅವರು ನಮ್ಮ ದೇಶ 16ನೇ ಶತಮಾನಕ್ಕೆ ಹೋಗಿದೆ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.
Advertisement
Sights that made me very sad.
At the Pashu Arogya Mela in Mathura, saw cows being operated and heaps of plastic being removed from their bodies.
This is deplorable and should inspire us to work towards reduced and careful plastic usage. pic.twitter.com/B5UjC5iKiA
— Narendra Modi (@narendramodi) September 11, 2019
Advertisement
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮವನ್ನು (ಎನ್‍ಎಡಿಸಿಪಿ) ಮತ್ತು ರೈತರಿಗಾಗಿ ಇತರ ಯೋಜನೆಗಳೊಂದಿಗೆ ಪ್ರಾರಂಭಿಸಿದ ಮೋದಿ ಅವರು, ನಮ್ಮ ದೇಶದ ಗ್ರಾಮೀಣ ಅರ್ಥಿಕತೆಯ ಬಗ್ಗೆ ಪ್ರಾಣಿಗಳಿಲ್ಲದೆ ಮಾತನಾಡಲು ಸಾಧ್ಯವೆ. ಪರಿಸರ ಮತ್ತು ಪ್ರಾಣಿಗಳು ಭಾರತದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಪ್ರಕೃತಿ ಮತ್ತು ಆರ್ಥಿಕ ಪ್ರಗತಿಯ ಬಗ್ಗೆ ಸಮತೋಲನವನ್ನು ಕಾಪಾಡಿಕೊಂಡು ಸಬಲೀಕೃತ ಭಾರತದತ್ತ ಸಾಗಬೇಕು ಎಂದು ಹೇಳಿದರು.
Advertisement
ನಮ್ಮ ಕೇಂದ್ರ ಸರ್ಕಾರ 2024ರ ಅವಧಿಯಲ್ಲಿ 12,652 ಕೋಟಿ ರೂ. ವೆಚ್ಚದಲ್ಲಿ ಒಂದು ಯೋಜನೆಯನ್ನು ಮಾಡಿದ್ದು, ಇದರ ಪ್ರಕಾರ ಕಾಲುಬಾಯಿ ರೋಗಕ್ಕೆ ತುತ್ತಾಗುವ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿಗಳು ಸೇರಿದಂತೆ 500 ದಶಲಕ್ಷಕ್ಕೂ ಹೆಚ್ಚು ಪ್ರಾಣಿಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗಿಯಾಗಿದ್ದರು.
Advertisement
As we begin ‘Swachhata Hi Seva’ and pledge to reduce single use plastic, I sat down with those who segregate plastic waste.
I salute them for their hardwork and contribution towards fulfilling Bapu’s dream. pic.twitter.com/3ARJ2CenZH
— Narendra Modi (@narendramodi) September 11, 2019
ಈ ಯೋಜನೆಯಲ್ಲಿ ಬ್ರೂಸೆಲೋಸಿಸ್ ಕಾಯಿಲೆಯ ವಿರುದ್ಧ ಹಸುಗಳಿಗೆ ಲಸಿಕೆ ಹಾಕುವ ಗುರಿಯನ್ನು ಕೂಡ ಹೊಂದಿದ್ದೇವೆ ಎಂದು ಮೋದಿ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪಿಎಂ ಮೋದಿ ಅವರು ರೈತರು, ಪಶುವೈದ್ಯಕೀಯ ವೈದ್ಯರು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ವಿಭಜಕರೊಂದಿಗೆ ವೈಯಕ್ತಿಕವಾಗಿ ಸಂವಹನ ನಡೆಸಿದರು. ಇದರ ಜೊತೆಗೆ ಅವರು ಕಸದಿಂದ ಪ್ಲಾಸ್ಟಿಕ್ ಅನ್ನು ಬೇರ್ಪಡಿಸುವ ಮಹಿಳೆಯರೊಂದಿಗೆ ಕುಳಿತು ಅದರ ಮಹತ್ವವನ್ನು ವಿವರಿಸಿದರು.