ರಾಮನಗರ: ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಚನ್ನಪಟ್ಟಣದ ಗೌಡಗೆರೆ ಗ್ರಾಮದ ಶಕ್ತಿದೇವತೆ ಚಾಮುಂಡೇಶ್ವರಿ ತಾಯಿಯ 16 ಕೆ.ಜಿ ತೂಕದ ಚಿನ್ನದ ವಿಗ್ರಹಕ್ಕೆ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಪ್ರಕರಣದ ವಿಚಾರವಾಗಿ ಹೇಳಿಕೆ ಕೊಟ್ಟ ಅವರು, ಸರ್ಕಾರದಿಂದ ಎರಡು ಸಮುದಾಯವನ್ನು ಬೆಸೆಯುವ ಕೆಲಸ ನಡೆಯುತ್ತಿಲ್ಲ. ಸಿಎಂ ಬೊಮ್ಮಾಯಿ ಅವರಿಂದ ಈ ರೀತಿಯ ಮಂಗಳೂರು ಪ್ರವಾಸ ನಿರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಜೈಲಿನಲ್ಲೇ ಉಕ್ರೇನ್ ಖೈದಿಗಳ ಸಾವು – ತನಿಖೆಗೆ UN, ರೆಡ್‍ಕ್ರಾಸ್ ಆಹ್ವಾನಿಸಿದ ರಷ್ಯಾ
Advertisement
Advertisement
ನಾಳೆ ನಾನು ಮಂಗಳೂರಿಗೆ ಹೋಗ್ತಿದ್ದೇನೆ. ಹತ್ಯೆಯಾದ ಮೂರು ಕುಟುಂಬವನ್ನು ಭೇಟಿಯಾಗ್ತಿದ್ದೇನೆ. ನನ್ನದೇ ಆದ ಮಾಹಿತಿಯೂ ಇದೆ. ಮೂರು ಕುಟುಂಬಕ್ಕೂ ಸಾಂತ್ವನ ಹೇಳ್ತೇನೆ. ಇಲ್ಲಿ ರಾಜಕೀಯ ಬಂಡವಾಳ ಮಾಡಿಕೊಂಡಿದ್ದಾರೆ, ರಾಜಕೀಯದ ದೊಡ್ಡಮಟ್ಟದ ಷಡ್ಯಂತ್ರವಿದೆ. ಭಾವನಾತ್ಮಕ ವಿಚಾರ ಕೆದಕಿ ರಾಜಕೀಯ ಲಾಭ ಪಡೆಯಲು, ಮತ ಪಡೆಯಲು ಕೆಲ ಪಕ್ಷ ಹೊರಟಿವೆ ಎಂದು ಟೀಕಿಸಿದರು.
Advertisement
Advertisement
ರಾಜಕೀಯ ನಾಯಕರು, ಸರ್ಕಾರದ ನಡವಳಿಕೆ ಬಗ್ಗೆ ರಾಜ್ಯದ ಜನರಲ್ಲಿ ಅಸಮಾಧಾನವಿದೆ. ಎಲ್ಲ ರಾಜಕೀಯ ಪಕ್ಷಗಳು, ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ. ಸಂಘಟನೆಗಳಿಗೂ ನಾನು ಹೇಳುವುದು ಇಷ್ಟೇ. ಯಾರು ಬೇಕಾದರೂ ಸಂಘಟನೆ ಮಾಡಿಕೊಳ್ಳಲಿ ನನ್ನ ತಕರಾರಿಲ್ಲ. ಆದರೆ ಈ ರೀತಿಯ ಹತ್ಯೆಗಳಿಂದ ಸಂಘಟನೆ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ
ನಾನು ಯುವಕರಲ್ಲಿ ಮನವಿ ಮಾಡ್ತೇನೆ. ಶಾಂತಿಯ ವಾತವರಣ ತರಲು ಪ್ರಯತ್ನ ಮಾಡಿ. ನಿಮ್ಮ ಕುಟುಂಬದಲ್ಲಿ ಅಶಾಂತಿ ವಾತವರಣ ಬರುವುದು ಬೇಡ ಎಂದು ಮನವಿ ಮಾಡ್ತೇನೆ ಎಂದರು.