ಚಿಕ್ಕಮಗಳೂರು: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಕಾರಿಗೆ ಅಪಘಾತ ಮಾಡಿದ KA 18 A 8733 ಸಂಖ್ಯೆಯ ಲಾರಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ನಾಜೀರ್ ಅಹಮದ್ ಸನ್ ಆಫ್ ನೂರಹಮದ್ ಎಂಬವರಿಗೆ ಸೇರಿದ ಲಾರಿ ಆಗಿದೆ.
ನಾಜೀರ್ ಆಹಮದ್ ಈ ಲಾರಿಯನ್ನ ಖರೀದಿಸುವ ಮುನ್ನ ಕೊಪ್ಪ ತಾಲೂಕಿನ ಆಹಾರ ಇಲಾಖೆಯ ಅಧಿಕಾರಿ ರಮೇಶ್ ಸಹೋದರ ನಾಗೇಶ್ ಎಂಬವರ ಹೆಸರಿನಲ್ಲಿತ್ತು. ನಾಗೇಶ್ ಈ ಗಾಡಿಯನ್ನ ಫೆಬ್ರವರಿ 16, 2018 ರಂದು ಎನ್.ಆರ್.ಪುರ ತಾಲೂಕಿನ ಬೆಳಗುಳ ನಿವಾಸಿ ನಾಜೀರ್ ಎಂಬವರಿಗೆ ಮಾರಿದ್ದಾರೆ. ಲಾರಿಯ ಮೂಲ ಮಾಲೀಕ ನಾಗೇಶ್ ಕೊಪ್ಪ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾರೆ.
Advertisement
Advertisement
ಅಂದು ಲಾರಿಗೆ ನೀಡುವಷ್ಟು ಹಣ ಇಲ್ಲದ ನಾಜೀರ್ ಎರಡು ಲಕ್ಷ ನೀಡಿ ಲಾರಿಯನ್ನ ಖರೀದಿಸಿದ್ದರು. ಲಾರಿ ಮೇಲೆ 2.91 ಲಕ್ಷ ಲೋನ್ ಇತ್ತು. ಗಾಡಿ ಖರೀದಿಸಿದ ನಾಜೀರ್ ಹಣಕ್ಕಾಗಿ ಬೇರೆ ಫೈನಾನ್ಸ್ ನಲ್ಲಿ ಸಾಲ ಕೇಳಿದ್ದ. ಅಲ್ಲಿ ಹಣ ಸಿಕ್ಕ ಮೇಲೆ ಲಾರಿ ನಾಗೇಶ್ ಹೆಸರಿನಲ್ಲಿದ್ದಾಗ ಶ್ರೀರಾಮ ಫೈನಾನ್ಸ್ ನಲ್ಲಿ ಇದ್ದ ಹಣವನ್ನ ಕಟ್ಟಿದ್ದಾರೆ.
Advertisement
Advertisement
ಆದರೆ ಶ್ರೀರಾಮ ಫೈನಾನ್ಸ್ ಹೆಡ್ ಆಫೀಸ್ ಬಾಂಬೆಯಲ್ಲಿರೋದ್ರಿಂದ ಲೋನ್ ಕ್ಲಿಯರ್ ಆಗಿ ಬರೋದು ತಡವಾಗಿದೆ. ಲೋನ್ ಕ್ಲೀಯರ್ ಆಗಿ ಬಂದ ನಂತರ ಲಾರಿ ಮಾಲೀಕ ನಾಜೀರ್ ಏಪ್ರಿಲ್ 13, 2018 ರಂದು ಬಂದು ಲಾರಿ ಮಾಲೀಕ ನಾಗೇಶ್‍ಗೆ ಬಾಕಿ ಕೊಡಬೇಕಿದ್ದ ಹಣವನ್ನ ನೀಡಿ ಫಾರಂ 29-30 ಕ್ಕೆ ಸಹಿ ಹಾಕಿಸಿಕೊಂಡು ಎಲ್ಲಾ ಡಾಕ್ಯೂಮೆಂಟ್ ಪಡೆದುಕೊಂಡು ಬಂದಿದ್ದಾರೆ. ಆದರೆ ಡಾಕ್ಯೂಮೆಂಟ್ ತೆಗೆದುಕೊಂಡು ಬಂದ ನಾಜೀರ್ ಗಾಡಿಯನ್ನು ತನ್ನ ಹೆಸರಿಗೆ ಆರ್ ಟಿಓ ಕಚೇರಿಯಲ್ಲಿ ವರ್ಗಾವಣೆ ಮಾಡಿಸಿಕೊಂಡಿಲ್ಲ. ಲಾರಿ ಇನ್ನು ನಾಗೇಶ್ ಹೆಸರಿನಲ್ಲೇ ಇದೆ. ಆದರೆ ನಾಗೇಶ್ ಗಾಡಿ ಮಾರಾಟ ಮಾಡಿ ಮೂರು ತಿಂಗಳಾಗಿದೆ.