– ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಸಂಸತ್‌ನಲ್ಲಿ ಮೋದಿ ಮೊದಲ ಭಾಷಣ
ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಸತ್‌ನಲ್ಲಿ ನರೇಂದ್ರ ಮೋದಿ (Narendra Modi) ಅವರು ಮೊದಲ ಭಾಷಣ ಮಾಡಿದರು. ಭಾಷಣದುದ್ದಕ್ಕೂ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
Advertisement
ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿಗಳು ನಮಗೆ ಮತ್ತು ದೇಶಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅದಕ್ಕಾಗಿ ಹೃದಯಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ. ನಿನ್ನೆ ಮತ್ತು ಇಂದು ಬಹಳಷ್ಟು ನಾಯಕರು ಈ ಭಾಷಣದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಆಯ್ಕೆಯಾಗಿ ಬಂದ ಸಂಸದರು ಮಾತನಾಡಿದರು. ಅನುಭವಿ ಸಂಸದರ ರೀತಿಯಲ್ಲಿ ಮಾತನಾಡಿದರು. ಮೊದಲ ಸಲವಾದರೂ ಸದನ ಗೌರವ ಹೆಚ್ಚಿಸಿದ್ದಾರೆ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಪ್ರಧಾನಿ ಭಾಷಣದ ವೇಳೆ ವಿಪಕ್ಷ ನಾಯಕರ ಗದ್ದಲ- ಸ್ಪೀಕರ್ ತರಾಟೆ
Advertisement
Advertisement
ವಿಶ್ವದ ಅತಿದೊಡ್ಡ ಚುನಾವಣೆ ಭಾರತದಲ್ಲಿ ನಡೆದಿದೆ. ದೇಶದ ಜನರು ಈ ಚುನಾವಣಾ ಅಭಿಯಾನದಲ್ಲಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾನು ಕೆಲವರ ನೋವು ಅರ್ಥ ಮಾಡಿಕೊಳ್ಳಬಲ್ಲೆ. ಸಾಕಷ್ಟು ಪ್ರಯತ್ನದ ಬಳಿಕ ಸೋತಿದ್ದಾರೆ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ. ಈ ವೇಳೆ ವಿಪಕ್ಷಗಳ ನಾಯಕರು ಗದ್ದಲ ಎಬ್ಬಿಸಿ ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಿದರು. ಗದ್ದಲದ ನಡುವೆಯೂ ಮೋದಿ ತಮ್ಮ ಭಾಷಣ ಮುಂದುವರಿಸಿದರು.
Advertisement
ಭಾರತದ ಜನರು ಮೂರನೇ ಬಾರಿಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಸಾಕಷ್ಟು ಯೋಚಿಸಿಯೇ ದೇಶದ ಜನರು ಜನಾದೇಶ ನೀಡಿದ್ದಾರೆ. ಹತ್ತು ವರ್ಷಗಳ ಟ್ರ್ಯಾಕ್ ರೆಕಾರ್ಡ್ ನೋಡಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಹೇಗೆ ಕೆಲಸ ಮಾಡಿದ್ದೇವೆ ಎಂದು ಜನರು ಗಮನಿಸಿದ್ದಾರೆ. 25 ಕೋಟಿ ಜನರನ್ನು ಬಡತನದಿಂದ ಹೊರ ತಂದಿದ್ದೇವೆ. ಸ್ವಾತಂತ್ರ್ಯದ ಬಳಿಕ ಇಷ್ಟು ದೊಡ್ಡ ಮಟ್ಟದಲ್ಲಿ ಬಡತನ ನಿರ್ಮೂಲಕ ಮಾಡುವ ಯತ್ನ ನಡೆದಿಲ್ಲ. 2014 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರದ ವಿರುದ್ಧ 0% ಸಹಿಷ್ಣುತೆ ಹೊಂದಿದ್ದೇವೆ ಅಂತಾ ಹೇಳಿದ್ದೇವೆ. ಅದರಂತೆ ಭ್ರಷ್ಟಾಚಾರ ವಿರುದ್ಧ ನೀತಿಗಳನ್ನು ರೂಪಿಸಿದ್ದೇವೆ ಎಂದು ಮೋದಿ ತಿಳಿಸಿದರು. ಇದನ್ನೂ ಓದಿ: ಕೇಜ್ರಿವಾಲ್ ಬಂಧನ- ಸಿಬಿಐಗೆ ದೆಹಲಿ ಹೈಕೋರ್ಟ್ ನೋಟಿಸ್
ವಿಶ್ವದಲ್ಲಿ ಭಾರತಕ್ಕೆ ಗೌರವ ಸಿಗುತ್ತಿದೆ. ಎಲ್ಲ ದೇಶಗಳು ಗೌರವದಿಂದ ನೋಡುತ್ತಿವೆ. ದೇಶ ಮೊದಲು ಎನ್ನುವ ನಿಲುವು ಹೊಂದಿದ್ದೇವೆ. ನಮ್ಮ ಪ್ರತಿ ಕೆಲಸದಲ್ಲೂ ಇದೇ ಭಾವನೆಯಲ್ಲಿ ಕೆಲಸ ಮಾಡಿದ್ದೇವೆ. ಹತ್ತು ವರ್ಷದಲ್ಲಿ ನಮ್ಮ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ದೇಶ ದೀರ್ಘಾವಧಿ ತುಷ್ಟೀಕರಣ ರಾಜಕೀಯ ನೋಡಿದೆ. ಮೊದಲ ಬಾರಿಗೆ ಎನ್‌ಡಿಎ ಜಾತ್ಯತೀತ ಸರ್ಕಾರ ನೀಡಿದೆ. ತುಷ್ಟೀಕರಣ ಅಲ್ಲ, ಸಂತುಷ್ಟೀಕರಣ ಸರ್ಕಾರವನ್ನು ಜನರು ನೋಡಿದ್ದಾರೆ. ಪ್ರತಿ ಯೋಜನೆಯೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ್ದೇವೆ ಎಂದು ಹೇಳಿದರು.