ಯಾದಗಿರಿ: ಬೆಂಗಳೂರಿನಲ್ಲಿ (Bengaluru) ಆರ್ಸಿಬಿ (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ (Stampede Tragedy) 11 ಜನ ಸಾವನ್ನಪ್ಪಿದ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಬೇಸರ ವ್ಯಕ್ತಪಡಿಸಿದ್ದಾರೆ.
ಯಾದಗಿರಿಯಲ್ಲಿ (Yadgir) ನಡೆದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಆರೋಗ್ಯ ಆವಿಷ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ, ನಮ್ಮ ನಿಲುವುಗಳಿಗೆ, ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ. ಇಂತಹ ಘಟನೆ ನಡೆಯಬಾರದು, ದುರಂತಗಳು ಎಲ್ಲೂ ಸಂಭವಿಸಬಾರದು. ಯಾವುದೇ ಸರ್ಕಾರದಲ್ಲಿ ಆಗಬಾರದು ಎಂದಿದ್ದಾರೆ. ಇದನ್ನೂ ಓದಿ: ಆರ್ಸಿಬಿ ಅಂದ್ರೆ Real Culprits of Bangalore – ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ
ದುರಂತಗಳು ನಡೆದು ಬಡವರು ಸಾಯಬಾರದು. ಆದರೆ ಒಂದೊಂದು ಸಾರಿ ನಾವು ತಪ್ಪು ಮಾಡದೇ ಹೋದ್ರು, ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
ಕಾಲ್ತುಳಿತದಲ್ಲಿ 11 ಜನ ಸತ್ತಿದ್ದಕ್ಕೆ ಬಿಜೆಯವರು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ಕೇಳಿದರು. ಹಾಗಾದ್ರೆ ಕುಂಭಮೇಳದಲ್ಲಿ ಸುಮಾರು 40- 50 ಜನ ಸತ್ರಲ್ಲಾ ಅದಕ್ಕೆ ಯಾರು ಹೊಣೆ? ಬಿಜೆಪಿಯವರು ಬರೀ ಸುಳ್ಳು ಹೇಳ್ತಾರೆ, ಸುಳ್ಳೇ ಅವರ ಮನೆ ದೇವರು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್