ಧರ್ಮ, ಸಿದ್ಧಾಂತದ ಹೆಸರಿನಲ್ಲಿ ಕೆಲವರು ಸಂಘರ್ಷ ಸೃಷ್ಟಿಸುತ್ತಿದ್ದಾರೆ: ಅಜಿತ್ ದೋವಲ್

Public TV
1 Min Read
Ajit Doval

ನವದೆಹಲಿ: ಕೆಲವರು ಧರ್ಮ ಹಾಗೂ ಸಿದ್ಧಾಂತದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದು ದೇಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶನಿವಾರ ಎಚ್ಚರಿಕೆ ನೀಡಿದರು.

ದೆಹಲಿಯಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ ದೋವಲ್, ಕೆಲವು ಅಂಶಗಳು ಭಾರತದ ಪ್ರಗತಿಯನ್ನು ಹಾಳು ಮಾಡುವ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಧರ್ಮ, ಸಿದ್ಧಾಂತದ ಹೆಸರಿನಲ್ಲಿ ಕ್ರೌರ್ಯ ಹಾಗೂ ಘರ್ಷಣೆಯನ್ನು ಸೃಷ್ಟಿಸುತ್ತಿದ್ದಾರೆ. ಇದು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ ಹಾಗೂ ದೇಶದ ಹೊರಗೂ ಹರಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ – ಇಬ್ಬರು ಪೊಲೀಸರು ಅಮಾನತು

Ajit Doval NSA

ಜಾಗತಿಕ ಸಂಘರ್ಷವನ್ನು ಹೋಗಲಾಡಿಸಲು ದೇಶದಲ್ಲಿ ಏಕತೆಯನ್ನು ಕಾಪಾಡಬೇಕು. ಜಗತ್ತಿನಲ್ಲಿ ಸಂಘರ್ಷದ ವಾತಾವರಣವಿದೆ. ನಾವು ಆ ವಾತಾವರಣವನ್ನು ನಿಭಾಯಿಸಬೇಕಾದರೆ, ದೇಶದ ಏಕತೆಯನ್ನು ಒಟ್ಟಾಗಿ ಕಾಪಾಡಿಕೊಳ್ಳುವುದು ಮುಖ್ಯ ಎಂದರು. ಇದನ್ನೂ ಓದಿ: ಖಾದಿ ಧ್ವಜಕ್ಕೆ ಬೆಲೆ ಜಾಸ್ತಿ, 10 ಕೋಟಿ ಧ್ವಜ ತಯಾರಿಸುವುದು ಅಸಾಧ್ಯ: ಪ್ರಹ್ಲಾದ್ ಜೋಶಿ

ನಾವು ಮೂಕ ಪ್ರೇಕ್ಷಕರಾಗುವ ಬದಲು, ನಮ್ಮ ಧ್ವನಿಯನ್ನು ಬಲಪಡಿಸುವುದರೊಂದಿಗೆ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಬೇಕು. ನಾವು ಭಾರತದ ಪ್ರತಿಯೊಂದು ಪಂಗಡದವರು ಒಟ್ಟಾಗಿ ಒಂದು ದೇಶ ಎಂದು ಭಾವಿಸಬೇಕು. ನಾವು ಅದರ ಬಗ್ಗೆ ಹೆಮ್ಮೆಪಡಬೇಕು ಎಂದು ದೋವಲ್ ತಿಳಿ ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *