ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವರ ಸ್ವ ಕ್ಷೇತ್ರದಲ್ಲಿ ಸದ್ಯ ಹೆಣ್ಮಕ್ಕಳು ಶಾಲೆಗೆ ಹೋಗೋಕೆ ಹೆದರುತ್ತಿದ್ದಾರೆ. ಆ ವಿಕೃತ ಕಿರಾತಕರ ಕಾಟಕ್ಕೆ ಬೇಸತ್ತು ಕೆಲ ವಿದ್ಯಾರ್ಥಿಗಳಿಗೆ ಶಿಕ್ಷಣವೇ ಸಾಕು ಎನ್ನುವಂತಾಗಿದೆ. ಆದರೂ ಪೊಲೀಸ್ ಇಲಾಖೆ ಇಲ್ಲಿಯವರೆಗೆ ಕಿಡಿಗೇಡಿಗಳನ್ನ ಬಂಧಿಸಿದೇ ಇರೋದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
Advertisement
ಕೊಪ್ಪಳ ಜಿಲ್ಲೆ ಕನಗಿರಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕಿಡಿಗೇಡಿಗಳ ವಿಕೃತಿ ಮಿತಿಮೀರಿದೆ. ಕಾಲೇಜಿನ ಗೋಡೆ ಮೇಲೆ ಎಲ್ಲೆಂದರಲ್ಲಿ ಆಶ್ಲೀಲ ಗೋಡೆ ಬರಹಗಳನ್ನು ಬರೆದಿದ್ದಾರೆ. ಇಷ್ಟೇ ಅಲ್ಲದೇ ಬಸ್ ನಿಲ್ದಾಣ, ರಸ್ತೆ ಬದಿಯ ಗೋಡೆಗಳ ಮೇಲೂ ಕಿರಾತರು ವಿದಾರ್ಥಿನಿಯರ ಹೆಸರೊಂದಿಗೆ ಅಶ್ಲೀಲ ಪದಗಳನ್ನು ಬರೆಯುತ್ತಿದ್ದು, ಇದರಿಂದ ಮುಜುಗರಕ್ಕೊಳಗಾದ ವಿದ್ಯಾರ್ಥಿನಿಯರು ಶಾಲೆಗೆ ಬರುತ್ತಿಲ್ಲವಂತೆ. ಅದರಲ್ಲೂ ಕೆಲ ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿ ಈ ರೀತಿ ಬರಹ ಬರೆಯುತ್ತಿದ್ದು, ಭಾರೀ ಆತಂಕ ಮೂಡಿಸಿದೆ.
Advertisement
Advertisement
ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಂತೆ ಶಾಲೆಗೆ ಭೇಟಿಕೊಟ್ಟ ಗಂಗಾವತಿ ಡಿವೈಎಸ್ಪಿ ಬಾಲಕಿಯರಿಗೆ ಧೈರ್ಯ ತುಂಬಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಕೇಸ್ ಖುಲಾಸೆ ಮಾಡಿಕೊಡಲು ಲಂಚ – ಲೋಕಾಯುಕ್ತ ಬಲೆಗೆ ಬಿದ್ದ ಹೆಡ್ ಕಾನ್‌ಸ್ಟೇಬಲ್
Advertisement
ಒಟ್ಟಾರೆ ಕನಕಗಿರಿಯ ಈ ಘಟನೆ ಜಿಲ್ಲೆಯ ಹೆಣ್ಣುಮಕ್ಕಳ ಶೈಕ್ಷಣಿಕ ಜೀವನದ ಮೇಲೆ ದುಷ್ಪರಿಣಾಮ ಬೀರಿದ್ದು, ವಿದ್ಯಾರ್ಥೀನೀಯರನ್ನು ಶಾಲಾ-ಕಾಲೇಜಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಕಿರಾತಕರನ್ನ ಬಂಧಿಸಿ ಬಾಲಕಿಯರ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Web Stories