ಕೆಲವು ಬಿಜೆಪಿ ಶಾಸಕರು ಕೆಲಸ ಮಾಡಿಸಿಕೊಳ್ಳಲು ರಾತ್ರಿ ಡಿಕೆಶಿ ಮನೆಗೆ ಬರ್ತಾರೆ: ಎಸ್‌ಟಿಎಸ್‌

Public TV
1 Min Read
DK Shivakumar and st Somashekar

ಬೆಂಗಳೂರು: ಕೆಲವು ಬಿಜೆಪಿ ಶಾಸಕರು (BJP MLA’s) ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರ ಬಳಿ ಕೆಲಸ ಮಾಡಿಸಿಕೊಳ್ಳಲು ರಾತ್ರಿ ಅವರ ಮನೆಗೆ ಬಂದು ಹೋಗುತ್ತಾರೆ ಎಂದು ಯಶವಂತಪುರದ ಬಿಜೆಪಿ ಶಾಸಕ ಎಸ್. ಟಿ ಸೋಮಶೇಖರ್ (ST Somashekar) ಹೇಳಿದ್ದಾರೆ.

ಸದಾಶಿವನಗರದ ಡಿಕೆಶಿ ನಿವಾಸದ ಬಳಿ ಮಾತನಾಡಿದ ಅವರು, ಹೊಸ ವರ್ಷದ ಶುಭಾಶಯ ಹೇಳಲು ಬಂದಿದ್ದೆ. ನಿಮ್ಮ ನೇತೃತ್ವದಲ್ಲಿ ಬೆಂಗಳೂರು (Bengaluru) ಅಭಿವೃದ್ದಿ ಆಗಲಿ ಅಂತ ಹೇಳಿದೆ ಎಂದರು.

 

ನಮ್ಮ ಕ್ಷೇತ್ರದ ಬಗ್ಗೆ ಒಂದು ಮನವಿ ಇತ್ತು ಹಾಗಾಗಿ ಬಂದಿದ್ದೆ. ಕೆಲ ಬಿಜೆಪಿ ಶಾಸಕರು ರಾತ್ರಿ ಬರುತ್ತಾರೆ. ಮತ್ತೊಂದಿಷ್ಟು ಜನ ಮಾಧ್ಯಮದ ಕಣ್ಣು ತಪ್ಪಿಸಿ ಹೋಗುತ್ತಾರೆ. ನಾನು ರಾಜರೋಷವಾಗಿ ಬಂದು ಹೋಗುತ್ತಿದ್ದೇನೆ. ಕೆಲವರ ಹಾಗೆ ಕತ್ತಲಲ್ಲಿ ಬಂದು ಹೋಗಲ್ಲ. ನಾನಿದ್ದಾಗಲೂ ಸಾಕಷ್ಟು ಜನ ಬರುತ್ತಿದ್ದರು. ಆದರೆ ನೀವು ಅವರನ್ನು ಗಮನಿಸುವುದಿಲ್ಲ, ಯಶವಂತಪುರ ಶಾಸಕರನ್ನು ಮಾತ್ರ ಗಮನಿಸುತ್ತೀರಿ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: Katera: ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಧಕ್ಕೆ ಬರಬಾರದು- ದರ್ಶನ್

 

Share This Article