Districts
ಐಸಿಸ್ ನಲ್ಲಿದ್ದಾರಂತೆ ಕೆಲ ಸಂಘಟನೆಗಳಲ್ಲಿ ಗುರುತಿಸಿಕೊಂಡ ಕಾರ್ಯಕರ್ತರು!

ಮಡಿಕೇರಿ: ಕಾಫಿನಾಡಿನ ಕೆಲವರು ಸಾಮಾಜಿಕ ಜಾಲತಾಣಗಲ್ಲಿ ಸಕ್ರಿಯರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಕೇರಳ ಪೊಲೀಸರು ಬಯಲಿಗೆಳೆದಿದ್ದಾರೆ.
ಉಗ್ರಗಾಮಿ ಸಂಘಟನೆ ಐಸಿಸ್‍ಗೆ ಸೇರಲು ಯುವಕರಿಗೆ ನೆರವು ನೀಡುತ್ತಿದ್ದ ಆರೋಪದ ಮೇಲೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಲಶ್ಯೇರಿಯಲ್ಲಿ ಕೂಡಾಳಿ ನಿವಾಸಿ ವಿ.ಕೆ.ಹಂಸ ಹಾಗೂ ಮನಾಫ್ ರೆಹಮಾನ್‍ರನ್ನ ಬಂಧಿಸಲಾಗಿದೆ.
ಬಂಧಿತರನ್ನು ವಿಚಾರಣೆ ನಡೆಸಿದ ವೇಳೆ ಕೊಡಗು ಜಿಲ್ಲೆಯಲ್ಲೂ ಐಎಸ್ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಅವರು ಬಹಿರಂಗಪಡಿಸಿದ್ದಾರೆ. ಕೊಡಗಿಗೂ ಐಸಿಸ್ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸುತ್ತಿದೆ. ಕಾರ್ಯಕರ್ತರು ಸಕ್ರಿಯವಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಸಂಘಟನೆಗಳಲ್ಲೂ ಗುರುತಿಸಿಕೊಂಡಿದ್ದಾರೆ ಎನ್ನುವ ವಿಷಯವನ್ನು ಅಡುಗೆ ಕೆಲಸ ಮಾಡುತ್ತಿರುವ ಹಂಸ ಒಪ್ಪಿಕೊಂಡಿದ್ದಾನೆ ಎಂದು ಕಣ್ಣೂರು ಪೊಲೀಸರು ತಿಳಿಸಿದ್ದಾರೆ.
