BellaryDistrictsKarnatakaLatestMain Post

ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ

– ಆನಂದ್ ಸಿಂಗ್ ಹೈ ಪ್ರೊಫೈಲ್ ರಾಜಕಾರಣಿ

ಬಳ್ಳಾರಿ: ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದರು.

ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೊಂದು ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳೂ ನಡೆದಿದ್ದು, ಸಿಎಂ ಬೊಮ್ಮಾಯಿ ಅವರನ್ನೂ ಸಹ ಭೇಟಿ ಮಾಡಿ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಮಾಜ್ ಮಾಡಲು ಅವಕಾಶ ನೀಡಲ್ಲ – ಹರ್ಯಾಣ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಒಂದು ವೇಳೆ ಉಸ್ತುವಾರಿ ಸಚಿವ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ. ಸಚಿವ ಆನಂದ್ ಸಿಂಗ್ ಹೈ ಪ್ರೊಫೈಲ್ ರಾಜಕಾರಣಿ. ಅವರು ಕೇವಲ ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ. ಶ್ರೀರಾಮುಲು ಅವರು ಲೋಫೈ ರಾಜಕಾರಣಿ. ಹೀಗಾಗಿ ಅವರಿಗೆ ಬಳ್ಳಾರಿ ಉಸ್ತುವಾರಿ ಕೊಡಬೇಕು ಎಂದು ಕುಹಕವಾಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗೆಯ ವಿಚಾರವೇ ನಡೆದಿಲ್ಲ. ಸಿಎಂ ಬದಲಾಗುವುದಿಲ್ಲ, ಅರಾಮಾಗಿ ನಮ್ಮ ಸರ್ಕಾರ ಮುಂದುವರೆಯಲಿದೆ ಎಂದರು.

ಎಂಎಲ್‍ಸಿ ಚುನಾವಣೆಯ ಫಲಿತಾಂಶ ಮುಂದಿನ ದಿಕ್ಸೂಚಿಯಾಗಲಿದೆ. ಮುಂದೆಯೂ ನಮ್ಮ ಸರ್ಕಾರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರೆಡ್ಡಿ, ನನ್ನ ಹಣೆಯಲ್ಲಿ ನಾನು ಮಂತ್ರಿ ಆಗಬೇಕು ಅಂತಾ ಬರೆದಿದ್ರೆ ಅದನ್ನು ಯಾರು ತಪ್ಪಿಸುವುದಕ್ಕೆ ಆಗಲ್ಲ. ನನಗೆ ಸಚಿವ ಸ್ಥಾನ ನೀಡುವುದು ದೇವರಿಗೆ ಬಿಟ್ಟ ವಿಚಾರ ಎಂದು ಮಂತ್ರಿಮಂಡಲ ವಿಸ್ತರಣೆ ಬಗ್ಗೆಯೂ ವಿವರಿಸಿದರು. ಇದನ್ನೂ ಓದಿ: ಕಾರಿನ ಬಿಡಿ ಭಾಗಗಳಿಂದ ಹೆಲಿಕಾಪ್ಟರ್ ರೆಡಿ – ವೀಡಿಯೋ ವೈರಲ್

Bommai

ಮತಾಂತರ ಕಾಯ್ದೆ ಕುರಿತು ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಬಲವಂತವಾಗಿ ಮತಾಂತರ ಮಾಡಬಾರದು. ಇದಕ್ಕೆ ನನ್ನ ವಿರೋಧವಿದೆ. ಪ್ರೀತಿಸಿ, ನಂಬಿಸಿ ಮತಾಂತರ ಮಾಡುವುದು ಸರಿಯಲ್ಲ. ಲವ್ ಜಿಹಾದ್ ತಡೆ ಕಾಯ್ದೆ ಜಾರಿ ಆಗಬೇಕು. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವುದಕ್ಕೆ ನನ್ನ ಬೆಂಬಲವಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರೋಧದ ಕುರಿತು ಮಾತನಾಡಿದ ಅವರು, ವೋಟ್ ಬ್ಯಾಂಕ್ ವಿಭಜನೆ ಆಗುತ್ತೆ ಅಂತಾ ಸಿದ್ದರಾಮಯ್ಯ ಅವರು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧ ಮಾಡ್ತಿದ್ದಾರೆ. ಆದ್ರೆ ಮತಾಂತರ ನಿಷೇಧ ಕಾಯ್ದೆ ಜಾರಿ ಆಗಲೇಬೇಕು ಎಂದು ತಿಳಿಸಿದರು.

Leave a Reply

Your email address will not be published.

Back to top button