ಬೆಂಗಳೂರು: ಬಿಜೆಪಿ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನಿಗೆ ನಕಲಿ ಅಶ್ಲೀಲ ವೀಡಿಯೋ ಕಳುಹಿಸಿ ಅಪರಿಚಿತರು ಬ್ಲಾಕ್ ಮೇಲ್ ಮಾಡಿದ್ದಾರೆ.
ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್‍ಗೆ ನಕಲಿ ವೀಡಿಯೋ ಸೃಷ್ಟಿಸಿ ಹಣಕ್ಕೆ ಅಪರಿಚಿತರು ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ಹಿನ್ನೆಲೆ ಆಡುಗೋಡಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿಶಾಂತ್ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧನ
Advertisement
Advertisement
ನಾನು ರಾಜಕೀಯವಾಗಿ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದೇನೆ. ನನ್ನ ಮತ್ತು ನನ್ನ ತಂದೆ ರಾಜಕೀಯ ಬೆಳವಣಿಗೆ ಸಹಿಸದ ಕೆಲವು ದುಷ್ಕರ್ಮಿಗಳು ರಾಜಕೀಯವಾಗಿ ನಮ್ಮನ್ನು ಮುಗಿಸಬೇಕೆಂಬ ದುರುದ್ದೇಶದಿಂದ ಈ ಕೃತ್ಯವೆಸಗಿದ್ದಾರೆ. ಯಾರೋ ಮಹಿಳೆಯ ಜೊತೆಯಲ್ಲಿರುವಂತೆ ಆಶ್ಲೀಲವಾದ ನಕಲಿ ವೀಡಿಯೋ ಸೃಷ್ಟಿಸಿ ನನ್ನನ್ನು ನೇರವಾಗಿ ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಹೆಣ್ಣು-ಗಂಡೆಂಬ ಭೇದ ಕೊರೊನಾಗೆ ಇಲ್ಲ: ಆನಂದ್ ಸಿಂಗ್
Advertisement
ವೀಡಿಯೋ ಮತ್ತು ಫೋಟೋಸ್‍ಗಳನ್ನು ನನ್ನ ತಂದೆಯ ಪಿಎ ಶೀನಿವಾಸಗೌಡ ಮತ್ತು ಭಾನುಪ್ರಕಾಶ್ ಅವರಿಗೆ ಕಳುಹಿಸಿದ್ದಾರೆ. ವಾಟ್ಸಾಪ್ ಮೂಲಕ ಪದೇ, ಪದೇ ಮೇಸೆಜ್‍ಗಳನ್ನು ಕಳುಹಿಸಿ ತಾವು ಕೇಳಿದಷ್ಟು ಹಣವನ್ನು ಕೊಡಬೇಕೆಂದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣವನ್ನು ನೀಡದಿದ್ದಲ್ಲಿ ಅಶ್ಲೀಲ ವೀಡಿಯೋ ಹಾಗೂ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
Advertisement
ನನ್ನ ಹಾಗೂ ನಮ್ಮ ತಂದೆಯ ರಾಜಕೀಯ ಭವಿಷ್ಯವನ್ನು ಮುಗಿಸುವುದಾಗಿಯೂ ಸಹ ಬೆದರಿಕೆ ಹಾಕಿದ್ದು, ಈ ಸಂಚಿನ ಹಿಂದೆ ತುಂಬಾ ಪ್ರಭಾವಶಾಲಿ ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಕೆಲ ದುಷ್ಕರ್ಮಿಗಳು, ನಮಗೆ ತೊಂದರೆ ನೀಡಬೇಕೆಂಬ ದುರುದ್ದೇಶದಿಂದ ಈ ರೀತಿ ಸಂಚು ರೂಪಿಸಿದ್ದಾರೆ. ಆ ಆಸಾಮಿಗಳ ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಮನವಿಮಾಡಿದ್ದಾರೆ.