ಬೆಂಗಳೂರು: ಮಾಜಿ ಸಚಿವ ವಿ.ಸೋಮಣ್ಣ (V Somanna) ಬಿಜೆಪಿ ಬಿಡಲ್ಲ. ಸೋಮಣ್ಣ ಅವರ ಜೊತೆ ದೂರವಾಣಿ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿ 4 ರಂದು ಸೋಮಣ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅವತ್ತು ಎಲ್ಲವೂ ದಿ ಎಂಡ್ ಆಗಲಿದೆ. ಅಲ್ಲದೇ ಯತ್ನಾಳ್ (Basangouda Patil Yatnal) ಅಸಮಾಧಾನ ವಿಚಾರವನ್ನು ಹೈಕಮಾಂಡ್ ಅವರು ನೋಡಿಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಅಂದು ಹೋರಾಡಿದ್ದಕ್ಕೆ ಈಗ ರಾಮಭಕ್ತರನ್ನು ಬಂಧಿಸ್ತಿದ್ದಾರೆ, ನನ್ನನ್ನೂ ಬಂಧಿಸ್ತಾರಾ? – ಆರ್.ಅಶೋಕ್ ಕಿಡಿ
ಲೋಕಸಭೆ ಬಳಿಕ ಸಾಕಷ್ಟು ಬದಲಾವಣೆ ಆಗುತ್ತೆ. ಶಿಂಧೆ, ಪವಾರ್ ಇದ್ದಾರೆ. ಸರ್ಕಾರ ಇರಲ್ಲ ಎಂದು ಕುಮಾರಸ್ವಾಮಿ ಸಹ ಹೇಳಿದ್ದಾರೆ. ಅವರಿಗೂ ಹಲವು ಸಂಪರ್ಕ ಇದೆ. ಯಾರೋ ಜ್ಯೋತಿಷಿ ಸಹ ಈ ಸರ್ಕಾರ ಉಳಿಯಲ್ಲ, ಅಲ್ಲೋಲ ಕಲ್ಲೋಲ ಎಂದಿದ್ದಾರೆ. ಸರ್ಕಾರ ಎರಡು ಭಾಗ ಆಗುತ್ತೆ ಎಂದಿದ್ದಾರೆ. ಆದರೆ ನಾನು ಜ್ಯೋತಿಷ್ಯ ನಂಬಲ್ಲ. ಆದರೆ ನನಗೂ ಮಾಹಿತಿ ಇದೆ. ನಾನು ಎಲ್ಲಿ ಯಾವಾಗ ಹೇಳಬೇಕೋ ಆಗ ಹೇಳುವೆ. ಡಿಕೆಶಿ ಅವರೇ ಸುಳಿವು ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಇದನ್ನೂ ಓದಿ: 2024ನೇ ವರ್ಷ ರಾಜ್ಯಕ್ಕೆ ಆಶಾದಾಯಕವಾಗಲಿದೆ – ಸಿದ್ದರಾಮಯ್ಯ