ಬೆಳಗಾವಿ: ಸೋಮಣ್ಣ (V.Somanna) ಹೊರಗಿನವನು. ಆತನಿಗೆ ವರುಣಾ (Varuna) ಕ್ಷೇತ್ರದಲ್ಲಿ ಒಂದು ಮತವೂ ಬೀಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಟಾಂಗ್ ಕೊಟ್ಟರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಿರಿಯ ನಾಯಕರನ್ನು ಹೈಕಮಾಂಡ್ ಸರಿಯಾಗಿ ನಡೆಸಿಕೊಂಡಿಲ್ಲ. ಈಶ್ವರಪ್ಪ ಪಕ್ಷದ ಸಿದ್ಧಾಂತ ಎನ್ನುತ್ತಿದ್ದರು. ಈಗ ಎಲ್ಲಿ ಹೋದ್ರು? ಜಗದೀಶ್ ಶೆಟ್ಟರ್ ನನ್ನ ಜೊತೆಗೆ ಮಾತನಾಡಿಲ್ಲ. ಬರೋದಾದರೆ ಸ್ವಾಗತ ಮಾಡುತ್ತೇನೆ. ನಾನು ನಿನ್ನೆಯಿಂದ ಬೆಳಗಾವಿಯಲ್ಲೇ ಇದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡವೇ ಮೊದಲು, ರೈತ ಚೈತನ್ಯ – ಜೆಡಿಎಸ್‌ನಿಂದ ಭರವಸೆ ಪತ್ರ ಬಿಡುಗಡೆ
Advertisement
Advertisement
ಲಕ್ಷ್ಮಣ ಸವದಿ ಕುರಿತು ಮಾತನಾಡಿ, ಕಾಂಗ್ರೆಸ್‌ಗೆ ಸವದಿ ಆಗಮನದಿಂದ ಪಕ್ಷಕ್ಕೆ ಲಾಭ ಆಗಲಿದೆ. ಅವರು ಕೇಳಿದ ಕಡೆಯಲ್ಲಿ ಪ್ರಚಾರಕ್ಕೆ ಜವಾಬ್ದಾರಿ ಕೊಡ್ತೀವಿ ಎಂದು ತಿಳಿಸಿದರು.
Advertisement
Advertisement
ಶಾಸಕ ಅನಿಲ ಬೆನಕೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಮಾಹಿತಿಯಿಲ್ಲ. ನನಗೆ ಗೊತ್ತಿಲ್ಲದೇ ನಾನು ಹೇಗೆ ಉತ್ತರ ಕೊಡಲಿ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪಿಎಂ ದೇವೇಗೌಡ
ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಯಾದಾಗ ಕೆಲವರು ಬಂಡಾಯ ಎದ್ದಿರುವುದು ನಿಜ. ಅವರನ್ನೆಲ್ಲ ಶಮನ ಮಾಡುವ ಕೆಲಸ ನಡೆದಿದೆ. ಗೋಕಾಕ ಕ್ಷೇತ್ರದಲ್ಲಿ ಅಶೋಕ ಪೂಜಾರಿ ಅವರನ್ನ ಕರೆಸಿ ಮಾತನಾಡಲಾಗಿದೆ. ಗೋಕಾಕ್‌ನಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ತಿಳಿಸಿದರು. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.