ಬಿಎಸ್‍ವೈ ಭೇಟಿ ವೇಳೆ ಟಿಕೆಟ್ ವಿಚಾರ ಚರ್ಚಿಸಿಯೇ ಇಲ್ಲ.. ಮೋದಿ ಮತ್ತೆ ಪ್ರಧಾನಿ ಆಗ್ಬೇಕು, ಅದಕ್ಕಾಗಿ ಬದ್ಧ: ಸೋಮಣ್ಣ

Public TV
1 Min Read
SOMANNA

ಬೆಂಗಳೂರು: ಲೋಕಸಭಾ ಚುನಾವಣೆ (General Elections 2024) ಹೊಸ್ತಿಲಲ್ಲಿ ಮಾಜಿ ಸಚಿವ ಸೋಮಣ್ಣ (Somanna), ಮಾಜಿ ಸಿಎಂ ಯಡಿಯೂರಪ್ಪ (B. S. Yediyurappa) ಅವರನ್ನು ಭೇಟಿಯಾಗಿದ್ದಾರೆ. ಸುಮಾರು ನಾಲ್ಕು ವರ್ಷಗಳ ಬಳಿಕ ಅವರು ಬಿಎಸ್‍ವೈ ಅವರನ್ನು ಭೇಟಿಯಾಗಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

yediyurappa somanna 1

ಬಿಎಸ್‍ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಟಿಕೆಟ್ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ದೇಶದ ಜನರ ಅಭಿಪ್ರಾಯ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಎಲ್ಲವೂ ರಾಷ್ಟ್ರದ ಅಭಿವೃದ್ಧಿಗಾಗಿ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಾಂಬ್‌ ಸ್ಫೋಟ ಪ್ರಕರಣದ ಪೂರ್ಣ ಸತ್ಯ ಹೊರಬರಲಿ – ಸಿಎಂ ಸೂಚನೆ

ಕರ್ನಾಟಕದ ಕೆಲವೊಂದು ಕಹಿ ಘಟನೆ ನೋಡಿದರೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅಗತ್ಯದ ಬಗ್ಗೆ ಮಾತುಕತೆ ನಡೆದಿದೆ. ತುಮಕೂರು ಕ್ಷೇತ್ರದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಈ ಹಿಂದೆ ನಾನೂ ಆಕಾಂಕ್ಷಿ ಎಂದಿದ್ದೆ. ಅದೆಲ್ಲ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ಮುಂದುವರೆಯುತ್ತದೆ ಎಂದಿದ್ದಾರೆ.

ಜೆಡಿಎಸ್‍ನಿಂದ ಸ್ಪರ್ಧೆ ವಿಚಾರ ಊಹಾಪೋಹ. ಅಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ನಾವ್ಯಾರೂ ದೊಡ್ಡವರಲ್ಲ, ರಾಜಕೀಯದಲ್ಲಿ ಆರೇಳು ಸಿಎಂ ಜೊತೆ ಕೆಲಸ ಮಾಡಿದ್ದೇನೆ. 45 ವರ್ಷಗಳಿಂದ ಮಣ್ಣು ಹೊತ್ತಿದ್ದೇನೆ. ಇದೆಲ್ಲಕ್ಕಿಂತ ದೇಶ ಮುಖ್ಯ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಮೊದಲ ಪಟ್ಟಿಯಲ್ಲಿ ಕರ್ನಾಟಕಕ್ಕೆ ಕೊಕ್‌ – ಆಕಾಂಕ್ಷಿಗಳಲ್ಲಿ ನಿರಾಸೆ

Share This Article