– ಇಬ್ಬರು ಸಚಿವರ ಮಧ್ಯೆ ಮುಸುಕಿನ ಗುದ್ದಾಟ
– ಅಶೋಕ್ ‘ಸಾಮ್ರಾಟ್’ ತರ ಆಡ್ತಾನೆ
ಬೆಂಗಳೂರು: ನಾನು ಎಲ್ಲರಿಗಿಂತ ಸೀನಿಯರ್, ಎಲ್ಲರಿಗಿಂತ ಜಾಸ್ತಿ ಅರ್ಹತೆ ಹೊಂದಿದ್ದೇನೆ. ಹಾಗಾಗಿ ನನ್ನನ್ನು ಬೆಂಗಳೂರು ಉಸ್ತುವಾರಿಯನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕೇಳಿದ್ದೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
Advertisement
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಮುನ್ನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಬೆಂಗಳೂರು ನಗರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಈಗಲೂ ಅವರೇ ವಹಿಸಿಕೊಂಡರೂ ತೊಂದರೆ ಇಲ್ಲ. ಆದರೆ ಇದು ಮುಖ್ಯಮಂತ್ರಿಗಳ ಪರಮಾಧಿಕಾರ ಯಾರಿಗೆ ಎಷ್ಟು ವರ್ಷ ಅನುಭವವಿದೆ, ಯಾರನ್ನು ಉಸ್ತುವಾರಿ ಮಾಡಬೇಕು ಎಂದು ಅವರಿಗೆ ತಿಳಿದಿದೆ. ನಾನು ಈ ವಿಚಾರಕ್ಕೆ ಮೂಗು ತೂರಿಸುವ ಕೆಲಸ ಮಾಡುವುದಿಲ್ಲ. ಆದರೆ ನಾನು ಜೆ.ಹೆಚ್ ಪಾಟೇಲರ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದವನು. ಎಲ್ಲರಿಗಿಂತ ಜಾಸ್ತಿ ಅರ್ಹತೆ ಹೊಂದಿದ್ದೇನೆ. ಹಾಗಾಗಿ ನನ್ನನ್ನು ಬೆಂಗಳೂರು ಉಸ್ತುವಾರಿಯನ್ನಾಗಿ ಮಾಡಿ ಎಂದು ಕೇಳಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ದಿವಂಗತ ಮನಗೂಳಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಬೇಡ: ಹೆಚ್‍ಡಿಕೆ
Advertisement
Advertisement
ನಾನು 40 ವರ್ಷ ರಾಜಕಾರಣದಲ್ಲಿ ಅನುಭವ ಹೊಂದಿದ್ದೇನೆ. ನನ್ನ ಇಲಾಖೆಯಲ್ಲಿ 1 ಲಕ್ಷ ಮನೆ ನೀಡುವ ಬಗ್ಗೆ ಯಾರದೋ ಸಲಹೆ ಪಡೆದು ಕೆಲಸ ಮಾಡುವ ಅವಶ್ಯಕತೆ ಇಲ್ಲ. ಬೆಂಗಳೂರು ಮಹಾನಗರದ ಬಡ ಜನರಿಗೆ ನಾವು ನೀಡುತ್ತಿರುವ ಕೆಲವು ಮನೆಗಳ ಕಾರ್ಯಕ್ರಮಕ್ಕೆ ನಾವು ಅಶೋಕ್‍ರನ್ನು ಕರೆದಿದ್ದೇವೆ. ಆದರೆ ಅವರು ಚಿಕ್ಕಮಗಳೂರಿನಲ್ಲಿದ್ದರು ಹಾಗಾಗಿ ಬರಲಿಲ್ಲ. ಅಶೋಕ್ ಎಂಎಲ್‍ಎ ಆಗಿದ್ದಾಗ ನಾನು ಮಂತ್ರಿಯಾಗಿದ್ದೆ. ಹಾಗಂತ ನನಗೆ ದುರಂಹಕಾರ ಇಲ್ಲ. ನನಗೆ ನನ್ನ ಪಕ್ಷ ಮುಖ್ಯ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಐಟಿ ದಾಳಿಗೂ, ರಾಜಕೀಯಕ್ಕೂ ಸಂಬಂಧ ಇಲ್ಲ: ಕೋಟಾ ಶ್ರೀವಾಸ ಪೂಜಾರಿ
Advertisement
ನಮ್ಮ ಬೆಂಗಳೂರು ನಗರದಲ್ಲಿರುವವರು ಉಸ್ತುವಾರಿ ಸಚಿವರಾಗುವುದಕ್ಕೆ ಯಡಿಯೂರಪ್ಪ ಅವರು ಈ ಹಿಂದೆ ಹೊಸ ಪೀಠಿಕೆ ಹಾಕಿ ಇಟ್ಟುಕೊಂಡಿದ್ದರು. ಇವರಿಗೂ ನಾನು ಅದನ್ನೇ ಹೇಳಿದ್ದೇನೆ. ಇಲ್ಲ ಯಾರಿಗಾದರೂ ಕೊಟ್ಟರೂ ಯಾವುದೇ ತೊಂದರೆ ಇಲ್ಲ. ಆದರೆ ನಾನು ಎಲ್ಲರಿಗಿಂತ ಬೆಂಗಳೂರು ನಗರಕ್ಕೆ ಸೀನಿಯರ್ ಆಗಿದ್ದೇನೆ. ಅಂಡರ್ ಪಾಸ್, ಫ್ಲೈ ಓವರ್, ಮೆಟ್ರೋ ಯೋಜನೆ ಎಲ್ಲವೂ ನನ್ನ ಕಾಲದಲ್ಲಿಯೇ ಆಗಿದೆ. ಈಗ ನನಗೆ 70 ವರ್ಷ ಎಲ್ಲರಿಗಿಂತ ಸೀನಿಯರ್ ಆಗಿದ್ದು, ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.
ಯಾವುದೇ ಮಿಂಟಿಂಗ್‍ಗೂ ಸೋಮಣ್ಣನವರು ಎಲ್ಲರನ್ನು ಕರೆಯುತ್ತಾರೆ ಆದರೆ ಅಶೋಕ್ ಅವರನ್ನು ಮಾತ್ರ ಕರೆಯುವುದಿಲ್ಲ ಎಂಬ ವಿಶ್ವನಾಥ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಶೋಕ್ ಎಂದು ಅವರ ತಂದೆ-ತಾಯಿ ಯಾಕೆ ಹೆಸರಿಟ್ಟರು ಗೊತ್ತಿಲ್ಲ. ಅಶೋಕ ಎಂದರೆ ಸಾಮ್ರಾಟ ಚಕ್ರವರ್ತಿ ಎಂದರ್ಥ. ಸಾಮ್ರಾಟ ಚಕ್ರವರ್ತಿ ಕೆಲಸನೇ ಬೇರೆ, ನನ್ನ ಕೆಲಸನೇ ಬೇರೆ. ವಿಶ್ವನಾಥ್ ಅವರು ಯಾಕೆ ಈ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಬಯಸಿದರೆ ಪಾಕ್ ಕ್ರಿಕೆಟ್ ಕತೆ ಮುಗಿದಂತೆ: ರಮೀಝ್ ರಾಜಾ
ಬೆಂಗಳೂರು ನಗರಕ್ಕೆ ಯಾರನ್ನು ಉಸ್ತುವಾರಿಯನ್ನಾಗಿ ಮಾಡಿಲ್ಲ. ಅಶೋಕ್ ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಸಮಯ ಹಾಗೂ ಕೋವಿಡ್ ನಿರ್ವಹಣೆಗಾಗಿ ಅಷ್ಟೇ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಸದ್ಯ ಇದೀಗ ಬೆಂಗಳೂರು ನಗರದ ಉಸ್ತುವಾರಿಯಾಗಿ ಅಶೋಕ್ ಅವರನ್ನು ಮಾಡುತ್ತಾರೋ ಅಥವಾ ಸೋಮಣ್ಣ ಅವರನ್ನು ಮಾಡುತ್ತಾರೋ, ಇಲ್ಲ ಬೇಕಿದ್ದರೆ ಇಬ್ಬರಿಗೂ ಬೆಂಗಳೂರು ಉಸ್ತುವಾರಿಯನ್ನು ವಹಿಸುತ್ತಾರೋ ಅವರಿಗೆ ಬಿಟ್ಟಿದೆ ಎಂದು ಹೇಳಿದ್ದಾರೆ.