Tuesday, 17th July 2018

ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ- ಗಂಗಾವತಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಸಿಕ್ತು ಪರಿಹಾರ

ಕೊಪ್ಪಳ: ಪಬ್ಲಿಕ್ ಟಿವಿ ವರದಿಯ ಬಳಿಕ ಗಂಗಾವತಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

ಗಂಗಾವತಿ ನಗರಕ್ಕೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ಇಂದು ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ವರದಿಗೆ ಸ್ಪಂದಿಸಿರೋ ನಗರಸಭೆ ಹಂಗಾಮಿ ಅಧ್ಯಕ್ಷ ಹಾಗೂ ಅಧಿಕಾರಿಗಳು ಜಾಕ್ ವೆಲ್ ಗೆ ಭೇಟಿ ನೀಡಿ ಡ್ಯಾಂ ನಿಂದ ನೀರು ಹರಿಸಿ ಗಂಗಾವತಿ ನಗರಕ್ಕೆ ಬುಧವಾರದಿಂದ ಯಥಾ ಸ್ಥಿತಿಯಲ್ಲಿ ಕುಡಿಯೋ ನೀರು ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ.

ಹೊಸಪೇಟೆ ತಾಲೂಕಿನ ವೆಂಕಟಾಪುರದಲ್ಲಿರೋ ಜಾಕ್ ವೆಲ್‍ಗೆ ಡ್ಯಾಮ್ ನಿಂದ ನೀರು ಬಿಡುಗಡೆ ಮಾಡಿದ್ದು, ಆನೆಗುಂದಿ ನೂತನ ಸೇತುವೆ ಮಾರ್ಗವಾಗಿ ದೇವಘಾಟ್ ಬಳಿ ನೀರು ಶೇಖರಣೆ ಆಗುವಂತೆ ವ್ಯವಸ್ಥೆ ಮಾಡಿದ್ದಾರೆ.

Leave a Reply

Your email address will not be published. Required fields are marked *