ರಾಯಚೂರು: ರಜೆ ಮೇಲೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದಲ್ಲಿ ನಡೆದಿದೆ.
ಯೋಧ ಶಿವಕುಮಾರ್ (34) ಮೃತಪಟ್ಟ ಯೋಧ. ಶಿವಕುಮಾರ್ ರಾಜಸ್ಥಾನದ ಜೋಧಪುರದಲ್ಲಿ ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶಿವಕುಮಾರ್ ವಾರದ ರಜೆ ಮೇಲೆ ತಮ್ಮ ಸ್ವಗ್ರಾಮಕ್ಕೆ ಬಂದಿದ್ದರು.
ರಜೆಗೆ ಬಂದಿದ್ದ ವೇಳೆ ಶಿವಕುಮಾರ್ ಹೃದಯಘಾತದಿಂದ ನಿಧನರಾಗಿದ್ದಾರೆ. ಶಿವಕುಮಾರ್ ಕಳೆದ 15 ವರ್ಷದಿಂದ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಮೊದಲು ಶಿವಕುಮಾರ್ ಅವರಿಗೆ ಎರಡು ಬಾರಿ ಹೃದಯಾಘಾತ ಕಾಣಿಸಿಕೊಂಡಿತ್ತು.
ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿ ಯೋಧ ಶಿವಕುಮಾರ್ ಕೊನೆಯುಸಿರು ಎಳೆದಿದ್ದಾರೆ. ಇಂದು ಮಧ್ಯಾಹ್ನ ಶಿವಕುಮಾರ್ ಅವರ ಪಾರ್ಥಿವ ಶರೀರ ಸ್ವಗ್ರಾಮ ಅಲಬನೂರಿಗೆ ಆಗಮಿಸುವ ಸಾಧ್ಯತೆ ಇದೆ.