ಗಾಂಧಿನಗರ: ತನ್ನ ಮಗಳ ಅಶ್ಲೀಲ ವೀಡಿಯೋವನ್ನು (Obscene Video) ಪ್ರಸಾರ ಮಾಡಿದ್ದನ್ನು ವಿರೋಧಿಸಿದ ಗಡಿ ಭದ್ರತಾ ಪಡೆ ಸಿಬ್ಬಂದಿಯನ್ನು (BSF Jawan) ಥಳಿಸಿ ಕೊಂದಿರುವ ಘಟನೆ ಗುಜರಾತ್ನ (Gujarat) ನಾಡಿಯಾಡ್ನಲ್ಲಿ ನಡೆದಿದೆ.
ಚಕ್ಲಾಸಿ ಗ್ರಾಮದಲ್ಲಿ 15 ವರ್ಷದ ಹುಡುಗ (Boy) ಬಾಲಕಿಯ (Girl) ಅಶ್ಲೀಲ ವೀಡಿಯೋವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ್ದ. ಇದಕ್ಕೆ ಬಾಲಕಿಯ ತಂದೆ ಯೋಧ ಮೆಲ್ಜಿಭಾಯಿ ವಘೇಲಾ ಶನಿವಾರ ಬಾಲಕನ ಮನೆಗೆ ತೆರಳಿ ಹುಡುಗನ ನಡೆಯನ್ನು ಖಂಡಿಸಿದ್ದಾರೆ. ಈ ವೇಳೆ ಹುಡುಗನ ಮನೆಯವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
Advertisement
Advertisement
ವರದಿಗಳ ಪ್ರಕಾರ, ಹುಡುಗ ಹಾಗೂ ಬಾಲಕಿ ಒಂದೇ ಶಾಲೆಯಲ್ಲಿ ಓದುತ್ತಿದ್ದು, ಇಬ್ಬರೂ ಸಂಬಂಧವನ್ನು ಹೊಂದಿದ್ದರು. ಆದರೆ ತನ್ನ ಮಗಳ ಅಶ್ಲೀಲ ವೀಡಿಯೋವನ್ನು ಪೋಸ್ಟ್ ಮಾಡಿದ್ದಕ್ಕೆ ಬಿಎಸ್ಎಫ್ ಜವಾನ ತನ್ನ ಕುಟುಂಬದೊಂದಿಗೆ ಹುಡುಗನ ಮನೆಗೆ ಮಾತನಾಡಲು ತೆರಳಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾಟಿಪಳ್ಳದಲ್ಲಿ ಜಲೀಲ್ ಕೊಲೆ ಪ್ರಕರಣ- ಓರ್ವ ಪರಾರಿ, ಮೂವರು ಆರೋಪಿಗಳ ಬಂಧನ
Advertisement
Advertisement
ಶನಿವಾರ ರಾತ್ರಿ ಯೋಧ ತನ್ನ ಪತ್ನಿ, ಇಬ್ಬರು ಪುತ್ರರು ಹಾಗೂ ಸೋದರಳಿಯನೊಂದಿಗೆ ಯುವಕನ ಮನೆಗೆ ತೆರಳಿದ್ದರು. ಆದರೆ ಹುಡುಗನ ಕುಟುಂಬದವರು ಅವರನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಇದನ್ನು ವಿರೋಧಿಸಿದಾಗ ಹುಡುಗನ ಮನೆಯವರು ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೊರೊನಾ ಭೀತಿಗೆ ಶಿಕ್ಷಣ ಇಲಾಖೆ ಅಲರ್ಟ್- ಶಾಲಾ-ಕಾಲೇಜುಗಳಲ್ಲಿ ಕೆಲ ನಿಯಮ ಜಾರಿಗೆ ಚಿಂತನೆ