ಗಡಿಯಿಂದ ಹಿಂದಿರುಗಿ ಬಂದ ಮಗನಿಗೆ ತಾಯಿ ಸೆಲ್ಯೂಟ್ ಮಾಡುವ ಮೂಲಕ ಸ್ವಾಗತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
12 ಸೆಕೆಂಡ್ ಇರುವ ಈ ವಿಡಿಯೋವನ್ನು ಹತಿಂದರ್ ಸಿಂಗ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಯೋಧರೊಬ್ಬರು ಕರ್ತವ್ಯದಿಂದ ಹಿಂದಿರುಗಿ ಮನೆಯೊಳಗೆ ಹೋಗುವ ಮೊದಲು ತನ್ನ ತಾಯಿಯನ್ನು ನೋಡಿ ಸೆಲ್ಯೂಟ್ ಹೊಡೆಯುತ್ತಾರೆ. ಬಳಿಕ ತಾಯಿ ಕೂಡ ಸೆಲ್ಯೂಟ್ ಹೊಡೆದಿದ್ದಾರೆ. ಎಲ್ಲ ಸೈನಿಕರು ಹೀಗೆ ಕ್ಷೇಮವಾಗಿ ಮನೆಗೆ ಹಿಂದಿರುಗಲಿ. ಸಾಮಾಜಿಕ ಜಾಲತಾಣದಲ್ಲಿ ನೋಡಿದ ಅತ್ಯುತ್ತಮ ವಿಡಿಯೋ ಇದೆ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಗಡಿಯಿಂದ ಹಿಂದಿರುಗಿದ ಯೋಧ ಮನೆಯ ಮುಖ್ಯದ್ವಾರದ ಬಳಿ ನಿಂತಿದ್ದ ತನ್ನ ತಾಯಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಈ ವೇಳೆ ಕೈಯಲ್ಲಿ ಆರತಿ ತಟ್ಟೆ ಹಿಡಿದುಕೊಂಡು ನಿಂತಿದ್ದ ತಾಯಿ ಕೂಡ ತನ್ನ ಮಗನಿಗೆ ಸೆಲ್ಯೂಟ್ ಮಾಡುತ್ತಾರೆ. ಸೆಲ್ಯೂಟ್ ಮಾಡಿದ ಬಳಿಕ ಯೋಧ ತನ್ನ ತಾಯಿಯನ್ನು ತಬ್ಬಿಕೊಂಡು ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಾರೆ.
ಈ ವಿಡಿಯೋ ಎಲ್ಲಿ ಹಾಗೂ ಯಾವಾಗ ಸೆರೆ ಆಗಿದ್ದು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಈ ವೈರಲ್ ವಿಡಿಯೋಗೆ ಇದುವರೆಗೂ 12 ಸಾವಿರಕ್ಕೂ ಹೆಚ್ಚು ವ್ಯೂ ಹಾಗೂ 2 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಯೋಧನಿಗೆ ಹಾಗೂ ಅವರ ಕುಟುಂಬಸ್ಥರಿಗೆ ಒಳ್ಳೆಯದಾಗಲಿ ಎಂದು ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.
ಕೆಲವರು ಈ ವಿಡಿಯೋ ನೋಡಿ, ಇದು ತುಂಬಾ ಸುಂದರವಾಗಿದೆ. ತಾಯಿಯ ಸೆಲ್ಯೂಟ್ ಅದ್ಭುತವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು “ಹೆಮ್ಮೆಯ ಮಗ ಹಾಗೂ ಅವರಷ್ಟೇ ಹೆಮ್ಮೆಯ ತಾಯಿ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿ ನನ್ನ ಮುಖದಲ್ಲಿ ಭಾವನಾತ್ಮಕ ನಗುವನ್ನು ತಂದಿತು. ಯೋಧನಿಗೆ ಹಾಗೂ ಅವರ ಕುಟುಂಬಸ್ಥರಿಗೆ ನನ್ನ ಕಡೆಯಿಂದ ಹಾಟ್ಸ್ ಆಫ್ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.
A Fauji Coming Back Home From Duty, Before Entering His House He Salutes His Mom To Which His Mom Also Salutes Him.
May Every Soldier Returns Home Safely And Well.
Best Video On Internet Today. pic.twitter.com/ztjZi34REU
— ???? ਹਤਿੰਦਰ ਸਿੰਘ ???? (@hatindersinghr1) October 23, 2019