ಬೆಳಗಾವಿ(ಚಿಕ್ಕೋಡಿ): ಜಮ್ಮುವಿನಲ್ಲಿ ಸೋಮವಾರ ವೀರಮರಣ ಹೊಂದಿದ್ದ ಯೋಧ ಪ್ರಕಾಶ್ ಜಾಧವ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಅವರ ಸ್ವಗ್ರಾಮ ಬೂಧಿಹಾಳದಲ್ಲಿ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ನಡೆಸಲಾಯಿತು.
ಇಂದು ಬೂಧಿಹಾಳದಲ್ಲಿ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ಯೋಧ ಪ್ರಕಾಶ್ ಜಾಧವ್ ಅವರ ಅಂತ್ಯ ಸಂಸ್ಕಾರ ನಡೆದಿದೆ. ಯೋಧನ ಅಂತಿಮ ದರ್ಶನ ಪಡೆಯಲು 50 ಸಾವಿರಕ್ಕೂ ಹೆಚ್ಚು ಜನ ಬೂಧಿಹಾಳ ಗ್ರಾಮಕ್ಕೆ ಬಂದಿದ್ದರು. ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧೆಡೆಯಿಂದ ಜನರು ಬಂದು ಯೋಧನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದರು.
ಯೋಧ ಪ್ರಕಾಶ್ ಜಾಧವ್ ಜಮ್ಮುವಿನಲ್ಲಿ ಉಗ್ರರ ಜತೆ ಸೆಣಸಾಡಿ ವೀರಮರಣ ಹೊಂದಿದ್ದರು. ಇಂದು ಪ್ರಕಾಶ್ ಪಾರ್ಥಿವ ಶರೀರವನ್ನು ಜಮ್ಮುವಿನಿಂದ ಸ್ವಗ್ರಾಮ ಬೂಧಿಹಾಳಕ್ಕೆ ಸೇನಾ ಸಿಬ್ಬಂದಿ ತಂದಿದ್ದರು, ಇದೀಗ ವೀರ ಯೋಧನಿಗೆ ಸಕಲ ಗೌರವದಿಂದ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿದೆ.
ವೀರ ಯೋಧನ ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು, ವಿವಿಧೆಡೆಯಿಂದ ಜನ ಆಗಮಿಸಿದ್ದರು, ನೆರೆದ ಜನಸಾಗರವನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv