ತುಮಕೂರು: ವರ್ಷಕೊಮ್ಮೆ ರಜೆ ಪಡೆದು ತಮ್ಮ ಮಕ್ಕಳ ಶಾಲಾ ದಾಖಲಾತಿಗೆ ಬಂದಿದ್ದ ಬಿಎಸ್‌ಫ್ ಯೋಧ ವೇಣುಗೋಪಾಲ್(Venugopal) ಕರ್ತವ್ಯ ಕರೆಗೆ ರಜೆ ಮೊಟಕುಗೊಳಿಸಿ ದೇಶ ಸೇವೆಗೆ ಗಡಿಯತ್ತ ಮರಳಿದ್ದಾರೆ.
ವೇಣುಗೋಪಾಲ್ ಅವರು ಗುಬ್ಬಿ(Gubbi) ಪಟ್ಟಣದ 19ನೇ ವಾರ್ಡ್ ನಿವಾಸಿಗಳಾಗಿದ್ದಾರೆ. ಸೇನೆಗೆ ಮರಳುತ್ತಿರುವ ಯೋಧ ವೇಣುಗೋಪಾಲ್ ಅವರಿಗೆ ಗುಬ್ಬಿ ನಾಗರಿಕರು ಆತ್ಮೀಯ ಬೀಳ್ಕೊಡುಗೆ ನೀಡಿ, ಯುದ್ಧ ಗೆದ್ದು ಬನ್ನಿ ಎಂದು ಹಾರೈಸಿದರು. ಇದನ್ನೂ ಓದಿ:ಮೇ 17 ರಿಂದ ಮತ್ತೆ ಐಪಿಎಲ್ ಆರಂಭ
ವೇಣುಗೋಪಾಲ್ ಅವರು ಕರ್ತವ್ಯಕ್ಕೆ ಮರಳುತ್ತಿರುವ ವಿಷಯ ತಿಳಿದ ತಕ್ಷಣ ಅವರ ಮನೆಗೆ ಗುಬ್ಬಿ ನಾಗರಿಕರ ತಂಡವೊಂದು ಧಾವಿಸಿದ ಸನ್ಮಾನ ಮಾಡಿದರು. ಶತ್ರು ಪಾಕಿಸ್ತಾನದ(Pakistan) ವಿರುದ್ಧ ಸೆಣಸಾಡಿ, ವೀರ ಗೆಲುವು ಸಾಧಿಸಿ ಕ್ಷೇಮವಾಗಿ ಮರಳಿ ಬರುವಂತೆ ಶುಭ ಕೋರಿದರು. ಇದನ್ನೂ ಓದಿ: ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹೊಡೆಯಬಾರದು: DGMO ಸಭೆಯಲ್ಲಿ ಏನಾಯ್ತು?