ಶ್ರೀನಗರ: ಭಾರತದ ಗಡಿ ಪ್ರದೇಶದ ಜಮ್ಮು ಮತ್ತು ಕಾಶ್ಮೀರದ ರಚೌರಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಶನಿವಾರ ಪಾಕಿಸ್ತಾನ ಸೇನೆ ಗುಂಡು ಹಾಗೂ ಷೆಲ್ ದಾಳಿ ನಡೆಸಿದ್ದು, ಭಾರತೀಯ ಯೋಧರೊಬ್ಬರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಪಡೆ ವಕ್ತಾರರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನದ ಸೇನೆಯ ದಾಳಿಗೆ ಪ್ರತಿದಾಳಿ ಎದರಿಸುವಾಗ 35 ವರ್ಷದ ಯೋಧ ಲ್ಯಾನ್ಸ್ ನಾಯ್ಕ್ ಮೊಹಮದ್ ನಸೀರ್ ಅವರು ಪಾಕ್ ಸೇನೆಯ ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ.
ರಜೋರಿ ಎಂಬ ವಲಯದಲ್ಲಿ ಪಾಕಿಸ್ತಾನ ಸೇನೆಯು ಶನಿವಾರ ಮಧ್ಯಾಹ್ನ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಪ್ರತಿ ದಾಳಿ ನಡೆಸಿ ತಕ್ಕ ಉತ್ತರ ನೀಡಿದೆ ಎಂದು ರಕ್ಷಣಾ ಪಡೆ ವಕ್ತಾರರು ಹೇಳಿದ್ದಾರೆ.
- Advertisement
ಅಲ್ಲದೇ ಇಂದು ಮುಂಜಾನೆ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರ ಗ್ರೆನೇಡ್ ದಾಳಿಗೆ ಸಿಆರ್‍ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂಬುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- Advertisement
ಒಟ್ಟಾರೆ ಶ್ರೀನಗರದಿಂದ 36 ಕಿ.ಮೀ ದೂರದಲ್ಲಿರೋ ಸತೋರಾ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂಬುವುದಾಗಿ ವರದಿಯಾಗಿದೆ.