ನವದೆಹಲಿ: ಹನಿಟ್ರ್ಯಾಪ್ ಗೆ ಒಳಗಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐಗೆ ಸೇನಾ ಭದ್ರತಾ ಮಾಹಿತಿಯನ್ನು ನೀಡುತ್ತಿದ್ದ ಭಾರತೀಯ ಯೋಧನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಶಸ್ತ್ರಾಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಮ್ ವೀರ್ ಬಂಧಿತ ಯೋಧ. ಆತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಜನವರಿ 18ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಸೇನಾಧಿಕಾರಿ ಕರ್ನಲ್ ಸಂಬಿತ್ ಘೋಷ್ ತಿಳಿಸಿದ್ದಾರೆ.
Advertisement
ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸ್ ಇಲಾಖೆಗೆ ಸೇನೆಯಿಂದ ಎಲ್ಲ ರೀತಿಯ ಸಹಾಯ ಒದಗಿಸಲಾಗುತ್ತದೆ ಎಂದು ಸಂಬಿತ್ ಘೋಷ್ ಹೇಳಿದ್ದಾರೆ.
Advertisement
Advertisement
ಆರೋಪಿ ಸಿಕ್ಕಿದ್ದು ಹೇಗೆ?:
ಬಂಧಿತ ಯೋಧ ಸೋಮ್ ವೀರ್ ತನ್ನ ಫೇಸ್ ಬುಕ್ ಮೂಲಕ ಅನಿಕಾ ಛೋಪ್ರಾ ಹೆಸರಿನಲ್ಲಿದ್ದ ಐಎಸ್‍ಐ ಏಜೆಂಟ್ ಜತೆ ಚಾಟ್ ಮಾಡಿದ್ದಾನೆ. ಈ ವೇಳೆ ಜೈಸಲ್ಮೇರ್ ಜಿಲ್ಲೆಯ ಶಸ್ತ್ರಾಸ್ತ್ರ ಪಡೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ವಿಷಯ ಭಾರತೀಯ ಸೇನಾ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಕ್ಷಣವೇ ಸೋಮ್ ವೀರ್ ನನ್ನು ಬಂಧಿಸಿದ್ದಾರೆ.
Advertisement
ಸೇನೆಯಲ್ಲಿ ಸೇವೆ ಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತ್ತಿರುವವರು ಭದ್ರತಾ ವಿಷಯಗಳ ಕುರಿತು ಯಾವುದೇ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತಿಲ್ಲ. ಸೇನೆಯಲ್ಲಿ ತನ್ನ ಹುದ್ದೆ, ತಾನು ಸೇವೆ ಸಲ್ಲಿಸುತ್ತಿರುವ ಪ್ರದೇಶದ ಭದ್ರತಾ ಮಾಹಿತಿ, ಸಮವಸ್ತ್ರದಲ್ಲಿರುವ ಫೋಟೋಗಳನ್ನು ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡುವಂತಿಲ್ಲ ಎನ್ನುವ ಕಟ್ಟುನಿಟ್ಟಿನ ನಿಯಮ ಸೇನೆಯಲ್ಲಿದೆ.
Army is providing all assistance to civilian authorities in the investigation related to the Army jawan who was arrested by Rajasthan Police: Defence PRO Col Sambit Ghosh https://t.co/tky9btyMck
— ANI (@ANI) January 13, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv