ಮಂಡ್ಯ: ಸೇನೆಯಿಂದ ಮನೆಗೆ ಬಂದರೆ ಎಲ್ಲರ ಮೇಲೂ ರೇಗಾಡುತ್ತಿದ್ದ. ಆದರೆ ಹೋಗುವ ದಿನ ಮಾತ್ರ ನಗುತ್ತಾ ಮಾತನಾಡಿಸುತ್ತಿದ್ದ. ನನ್ನ ಮಗನನ್ನು ಕೊಂದವರಿಗೆ ಘೋರ ಶಿಕ್ಷೆಯಾಗಬೇಕು ಎಂದು ಹುತಾತ್ಮ ಯೋಧ ಗುರು ತಂದೆ ಹೊನ್ನಯ್ಯ ಅವರು ಆಕ್ರೋಶದಿಂದ ಕಣ್ಣೀರು ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಗುರು ಊರಿಗೆ ಬಂದರೆ ನಮ್ಮನ್ನು ಬಿಟ್ಟು ಹೋಗಬೇಕು ಎಂಬ ಹತಾಶೆಯಿಂದ ಮನೆಯಲ್ಲಿ ಎಲ್ಲರ ಮೇಲೆ ರೇಗಾಡುತ್ತಿದ್ದ. ಹೋಗುವ ದಿನ ಮಾತ್ರ ಎಲ್ಲರನ್ನು ನಗುನಗುತ್ತಾ ಮಾತನಾಡಿಸಿ ಹೋಗುತ್ತಿದ್ದ. ನಾನು ಮತ್ತೆ ಯಾವಾಗ ಬರುತ್ತೀಯಾ ಎಂದು ಕೇಳಿದಾಗ, ಅಪ್ಪ ಈಗ ಹೋಗುತ್ತಿದ್ದೇನೆ. ಅವರು ಯಾವಾಗ ಕಳುಹಿಸುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದ ಎಂದು ಗುರು ತಂದೆ ಹೊನ್ನಯ್ಯ ಅವರು ನೋವಿನಿಂದ ಹೇಳಿದ್ದಾರೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ
ಅವನ ತಾಯಿಗೆ ಯಾವಾಗಲೂ ಕಾಲ್ ಮಾಡಿ ಮಾತನಾಡುತ್ತಿದ್ದ. ಬುಧವಾರ ರಾತ್ರಿ ನನ್ನ ಮಗನ ಜೊತೆ ಫೋನ್‍ನಲ್ಲಿ ಮಾತನಾಡಿದ್ದೆ. ಇತ್ತೀಚೆಗಷ್ಟೆ ಹೊಸ ಮನೆ ಕಟ್ಟಿಸಿ ಈಗಷ್ಟೇ ಮದುವೆ ಮಾಡಿಸಿದ್ದೆ. ಆದರೆ ಈಗ ನನ್ನ ಮಗ ನಮ್ಮ ಜೊತೆಯಿಲ್ಲ ಎಂದು ಕಣ್ಣೀರು ಹಾಕುತ್ತ ಗುರು ತಂದೆ ಅಸ್ವಸ್ಥರಾಗುತ್ತಿದ್ದಾರೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು
ನನ್ನ ಮಗ ಎಲ್ಲರ ಮೇಲೂ ಪ್ರೀತಿ ಇಟ್ಟುಕೊಂಡಿದ್ದನು. ಅವನೇ ಸಾಲ ಮಾಡಿ ನಮಗೆ ಹಾಗೂ ತಮ್ಮಂದಿರಿಗಾಗಿ ಮನೆ ಕಟ್ಟಿಸಿದ್ದ. ನಮ್ಮಲ್ಲೆರನ್ನು ಪ್ರೀತಿ ಮಾಡುತ್ತಿದ್ದ. ನನ್ನ ಮಗನನ್ನು ಕೊಂದ ದುಷ್ಟರನ್ನು ಬಿಡಬಾರದು. ಅವರನ್ನು ಭೂಮಿ ಮೇಲೆ ಬಿಟ್ಟರೆ ಇನ್ನೂ ಎಷ್ಟು ಜನರ ಹೋಗುತ್ತಾರೋ ಎಂದು ಗುರು ತಂದೆ ಕಣ್ಣೀರು ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv