ಬಳ್ಳಾರಿ: ಜುಲೈ 1 ರಂದು ಮದುವೆಯಾಗಿ ಸಪ್ತಪದಿ ತುಳಿಯಬೇಕಾಗಿದ್ದ ಯೋಧರೊಬ್ಬರು ಇಂದು ತ್ರೀವ ಜ್ವರದಿಂದ ಮೃತಪಟ್ಟ ಮನಕಲಕುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹೂವಿನಹಡಗಲಿ ತಾಲೂಕಿನ ಬಸರಳ್ಳಿ ಗ್ರಾಮದ 30 ವರ್ಷದ ಯೋಧ ಹನುಮಂತಪ್ಪ ಕೊರ್ಲಗಟ್ಟಿ ಮೃತ ದುರ್ದೈವಿಯಾಗಿದ್ದು, ಇವರು ಜಾರ್ಖಂಡನ ಸೆಂಟ್ರಲ್ ಆರ್ಮಡ್ ಪೊಲೀಸ್ ಪೋರ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
Advertisement
Advertisement
ಮೃತ ಯೋಧರಿಗೆ ಮದುವೆ ನಿಗದಿಯಾಗಿತ್ತು. ಹೀಗಾಗಿ ಊರಿಗೆ ಊರೇ ಯೋಧರ ಮದುವೆಯ ತಯಾರಿಯಲ್ಲಿ ಓಡಾಡುತ್ತಿತ್ತು. ಆದ್ರೆ ವಿಧಿ ಮಾತ್ರ ಆ ಯೋಧರನ್ನೆ ಬಲಿ ತೆಗೆದುಕೊಂಡಿದೆ.
Advertisement
ಜುಲೈ 1 ರಂದು ಸಪ್ತಪದಿ ತುಳಿಯಬೇಕಾಗಿದ್ದ ಹನುಂತಪ್ಪ ತ್ರೀವ ಜ್ವರದಿಂದ ಬಳಲುತ್ತಿದ್ದರು. ಮದುವೆ ಸಂಭ್ರಮದಲ್ಲಿ ಓಡಾಡುತ್ತಿದ್ದ ಯೋಧ ಹನುಮಂತಪ್ಪರಿಗೆ ಜ್ವರ ತ್ರೀವವಾಗುತ್ತಿದ್ದಂತೆ ಗದಗ ಜಿಲ್ಲೆಯ ಮುಂಡರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
Advertisement
ಮದುವೆ ಸಂಭ್ರಮದಲ್ಲಿದ್ದ ಯೋಧ ಹನುಂತಪ್ಪ ಮನೆಯಲ್ಲೀಗ ಶೋಕ ಮಡುಗಟ್ಟಿದೆ. ಅಲ್ಲದೇ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.