ಬೆಳಗಾವಿ: ದೇಶದಲ್ಲಿ ಯೋಧರಿಗೆ ವಿಶೇಷ ಗೌರವಿದೆ. ಆದರೆ ಯೋಧರೊಬ್ಬರು ಪತ್ನಿ ಹಾಗೂ ಪ್ರೇಯಸಿಗೆ ಕೈ ಕೊಟ್ಟು, ಸಮಸ್ಯೆ ಬಗೆಹರಿಸಲು ಬಂದ ಸಮಾಜ ಸೇವಕಿಯನ್ನೇ ಮದುವೆಯಾದ ವಿಚಿತ್ರ ಘಟನೆಯೊಂದು ನಡೆದಿದೆ.
ಮೂಲತಃ ಬಾಗಲಕೋಟೆಯ ಮದರಕಂಡಿ ಗ್ರಾಮದ ಅಜಿತ್ ಮಾದರ್ ಮೂವರನ್ನು ಮದುವೆಯಾದ ಯೋಧ. ಸಿ.ಆರ್.ಪಿ.ಎಫ್ ನಲ್ಲಿ ಕೆಲಸ ಶುರು ಮಾಡಿದ ನಂತರ 2011ರಲ್ಲಿ ದಾಕ್ಷಾಯಿಣಿ ಎಂಬಾಕೆ ಜೊತೆ ಅಜಿತ್ ಮದುವೆ ನೆರವೇರಿತ್ತು. ಇಬ್ಬರು ಮಕ್ಕಳು ಕೂಡ ಇದ್ದರು. ಆದ್ರೆ ಅಜಿತ್ ಬಿಹಾರದಲ್ಲಿ ಕೆಲಸ ಮಾಡ್ತಿದ್ದ ವೇಳೆ ಪತ್ನಿಗೆ ಗೊತ್ತಾಗದಂತೆ ಇನ್ನೊಬ್ಬ ವಿವಾಹಿತೆಯೊಂದಿಗೆ ಲವ್ವಿ ಡವ್ವಿ ಶುರುವಾಗಿತ್ತು.
Advertisement
Advertisement
ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸೀಮಾ ಎಂಬಾಕೆಯನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿ ಸಂಸಾರ ಆರಂಭಿಸಿದ್ದನು. ಈ ವಿಚಾರ ಗೊತ್ತಾಗ್ತಿದ್ದಂತೆ ದಾಕ್ಷಾಯಿಣಿ, ಸಿ.ಆರ್.ಪಿ.ಎಫ್ ಕಮಾಂಡರ್ ಗೆ ದೂರು ಕೊಟ್ಟಿದ್ದಾರೆ. ಬಳಿಕ ಕಮಾಂಡರ್ ಕೌಟುಂಬಿಕ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಬರುವಂತೆ ಅಜಿತ್ ಮಾದರ್ ಗೆ 15 ದಿನ ರಜೆ ಮೇಲೆ ಊರಿಗೆ ಕಳುಹಿಸಿದ್ದರು. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿ ಮಗುವಾದ್ಮೇಲೆ ಕೈಕೊಟ್ಟ- ರೊಚ್ಚಿಗೆದ್ದ ಪತ್ನಿಯಿಂದ ಪತಿ ಮನೆಯೆದುರು ಆಕ್ರೋಶ
Advertisement
ಯಾವಾಗ ರಜೆಯಲ್ಲಿ ಊರಿಗೆ ಬಂದ ಬಳಿಕ ಜೆಡಿಎಸ್ ಕಿತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸೂರ್ಯವಂಶಿ ಬಳಿ ತನ್ನ ಸಂಸಾರದ ವಿವಾದ ಇತ್ಯರ್ಥ ಪಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಈ ಸಮಸ್ಯೆ ಇತ್ಯರ್ಥ ಮಾಡುವ ವೇಳೆ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು, ಇಬ್ಬರೂ ರಿಜಿಸ್ಟರ್ ಮದುವೆ ಕೂಡ ಆಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡೋಕೆ ಹೋದ ನನಗೆ ಜಯಶ್ರೀ ಸೂರ್ಯವಂಶಿ ಬೆದರಿಕೆ ಹಾಕಿದ್ದಾಳೆ ಅಂತ ನೊಂದ ದಾಕ್ಷಾಯಿಣಿ ಆರೋಪಿಸಿದ್ದಾರೆ.
Advertisement
ಸದ್ಯ ದಾಕ್ಷಾಯಿಣಿ ನನಗೆ ನ್ಯಾಯ ಕೊಡಿಸಿ ಎಂದು ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ಇನ್ನೊಂದು ಕಡೆ ಅಜಿತ್ ಪ್ರೇಯಸಿ ಸೀಮಾ ಬದುಕು ಕೂಡ ಅತಂತ್ರವಾಗಿದೆ. ಸಾಮಾಜ ಸೇವೆ ಮಾಡೋ ಜಯಶ್ರೀ ಸೂರ್ಯವಂಶಿ ಮಾಡಿರೋ ಕೆಲಸಕ್ಕೆ ದಾಕ್ಷಾಯಿಣಿ ಕುಟುಂಬ ಬೀದಿಪಾಲಾಗಿದೆ.
ಈ ಬಗ್ಗೆ ಠಾಣೆಯಲ್ಲಿ ದೂರು ಕೊಟ್ಟರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ದೇಶ ಕಾಯುವ ಯೋಧ ಇಬ್ಬರ ಬಾಳಲ್ಲಿ ಆಟವಾಡಿರೋದು ತಪ್ಪು. ನಮಗೆ ನ್ಯಾಯ ಕೊಡಿಸಿ ಅಂತ ನೊಂದ ಮಹಿಳೆ ಕಣ್ಣೀರಿಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv