ಮೈಸೂರು: ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಆಕೆಗೆ ಕೈಕೊಟ್ಟಿರುವ ಆರೋಪವೊಂದು ಯೋಧನ ವಿರುದ್ಧ ಕೇಳಿಬಂದಿದೆ.
ಮೈಸೂರಿನ ಇಲವಾಲ ಹೋಬಳಿಯ ನಿವಾಸಿ ರಂಜಿತ್ ಅವರ ವಿರುದ್ಧ ಯುವತಿ ಈ ಆರೋಪ ಮಾಡಿದ್ದಾರೆ. ಸದ್ಯ ಯುವತಿ ಯೋಧನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
Advertisement
ಕಾಶ್ಮೀರ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ರಂಜೀತ್, ಫೇಸ್ಬುಕ್ ಮೂಲಕ ಮೈಸೂರಿನ ಜನತಾನಗರದ ಯುವತಿಯ ಪರಿಚಯ ಮಾಡಿಕೊಂಡಿದ್ದಾರೆ. ಪರಿಚಯವು ಸ್ನೇಹವಾಗಿ ಇದೀಗ ಸ್ನೇಹ ಪ್ರೀತಿಗೆ ತಿರುಗಿ ಯೋಧ ಮದುವೆಯಾಗುವುದಾಗಿ ತಿಳಿಸಿದ್ದರು. ಅಲ್ಲದೇ ರಜೆ ಮೇಲೆ ಯೋಧ ರಂಜಿತ್ ತವರಿಗೆ ಬಂದಿದ್ದರು. ಈ ವೇಳೆ ತನ್ನ ಜೊತೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾರೆ. ಆದ್ರೆ ಇದೀಗ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಅಂತ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
Advertisement
ಯುವತಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ನೊಂದ ಯುವತಿ ತನಗೆ ನ್ಯಾಯ ಕೊಡಿಸುವಂತೆ ಯೋಧನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv