ಶ್ರೀನಗರ: ಬ್ಯಾಗ್ ನಲ್ಲಿ 2 ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
17 ಜಮ್ಮು ಕಾಶ್ಮೀರ ರೈಫಲ್ಸ್ ನ ಗೋಪಾಲ್ ಮುಖಿಯಾ ಬಂಧಿತ ಯೋಧ. ಇವರು ಜಮ್ಮು ಕಶ್ಮೀರದ ಗಡಿ ನಿಯಂತ್ರಣಾ ರೇಖೆ ಬಳಿ ಉರಿ ಸೆಕ್ಟರ್‍ನಲ್ಲಿ ಕಾರ್ಯ ನಿರ್ವಸುತ್ತಿದ್ದಾರೆಂದು ತಿಳಿದುಬಂದಿದೆ. ಗೋಪಾಲ್ ಇಂದು ಬೆಳಿಗ್ಗೆ ದೆಹಲಿಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅವರ ಲಗೇಜ್ ತಪಾಸಣೆ ಮಾಡಿದಾಗ ಗ್ರೆನೇಡ್ ಇರುವುದು ಪತ್ತೆಯಾಗಿದೆ.
Advertisement
ಯೋಧ ಗೋಪಾಲ್ ದೆಹಲಿಗೆ ಹೋಗಬೇಕಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆಗೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
ಯೋಧ ಡಾರ್ಜಿಲಿಂಗ್ ಮೂಲದವರಾಗಿದ್ದು, ಗ್ರೆನೇಡ್ ತಗೆದುಕೊಂಡು ಹೋರಟಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಕೆರೆಯಲ್ಲಿ ಸ್ಫೋಟಿಸಿ ಮೀನು ಹಿಡಿಯುವ ಸಲುವಾಗಿ ಗ್ರೆನೇಡ್ ತೆಗೆದುಕೊಂಡು ಹೋಗುತ್ತಿದ್ದುದಾಗಿ ಯೋಧ ಹೇಳಿದ್ದಾರೆಂದು ಸೇನಾ ಮೂಲಗಳಿಂದ ತಿಳಿದುಬಂದಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
Advertisement
Jawan belongs to Darjeeling and has accepted he was carrying grenades, says it was for causing blast in rivers to catch fish:Army Sources
— ANI (@ANI_news) April 3, 2017