ನವದೆಹಲಿ: ಬಟಿಂಡಾದಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ವರು ಸೈನಿಕರ ಹತ್ಯೆಯ ಪ್ರಕರಣದಲ್ಲಿ ಓರ್ವ ಯೋಧನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು (Punjab Police) ತಿಳಿಸಿದ್ದಾರೆ
ಬಟಿಂಡಾ ಸೇನಾ ನೆಲೆಯಲ್ಲಿ (Bathinda Military Station) ಯೋಧ ಮೋಹನ್ ದೇಸಾಯಿ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ವೈಯಕ್ತಿಕ ವಿಚಾರಕ್ಕಾಗಿ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿರುವುದಾಗಿ ಹೇಳಿದ್ದಾನೆ. ಇದನ್ನೂ ಓದಿ: ಲಿಂಗಾಯತ ನಾಯಕ ಶೆಟ್ಟರ್‌ಗೆ ಬಿಜೆಪಿಯಿಂದಾದ ಅವಮಾನ ಯಾವ ನಾಯಕನಿಗೂ ಆಗದಿರಲಿ: ಸಿದ್ದು
Advertisement
Advertisement
ಗುಂಡಿನ ದಾಳಿಗೆ ಸಂಬಂಧಿಸಿದಂತೆ ಘಟನೆಯ ಸಾಕ್ಷಿ ಮೇಜರ್ ಅಶುತೋಷ್ ಶುಕ್ಲಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಯ ಸಂಬಂಧ ನಾಲ್ವರು ಯೋಧರನ್ನು ಭಾನುವಾರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಏ.12ರ ಮುಂಜಾನೆ ನಡೆದಿದ್ದ ಗುಂಡಿನ ದಾಳಿಯಲ್ಲಿ ನಿದ್ರೆಯಲ್ಲಿದ್ದ ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು. ಸೇನೆಯ ಫಿರಂಗಿ ಘಟಕಕ್ಕೆ ಸೇರಿದ ಸಾಗರ್, ಕಮಲೇಶ್, ಸಂತೋಷ್ ಮತ್ತು ಯೋಗೇಶ್ ಹತ್ಯೆಯಾದ ಯೋಧರು ಎಂದು ತಿಳಿದು ಬಂದಿತ್ತು. ಯೋಧರ ಹತ್ಯೆಯು ರಾಜ್ಯದ ಭದ್ರತಾ ವ್ಯವಸ್ಥೆಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ (Separatist Amritpal Singh) ಮತ್ತು ಆತನ ಸಂಘಟನೆ ವಿರುದ್ಧದ ಕಾರ್ಯಾಚರಣೆಗೆ ಪ್ರತಿಕಾರದ ಊಹಾಪೋಹಗಳು ಕೇಳಿ ಬಂದಿತ್ತು.
Advertisement
ಗುಂಡಿನ ದಾಳಿ ನಡೆದ ದಿನ, ಕುರ್ತಾ-ಪೈಜಾಮಾದಲ್ಲಿದ್ದ ಕೆಲವು ಅಪರಿಚಿತ ಮುಸುಕುಧಾರಿಗಳು ಕಾಣಿಸಿಕೊಂಡಿದ್ದರು. ಒಬ್ಬ ವ್ಯಕ್ತಿ ಐಎನ್‍ಎಸ್‍ಎಎಸ್ ಅಸಾಲ್ಟ್ ರೈಫಲ್ (INSAS assault rifle) ಹೊಂದಿದ್ದು, ಮತ್ತೊಬ್ಬ ಕೊಡಲಿಯನ್ನು ಹಿಡಿದುಕೊಂಡಿದ್ದ. ಅವರು ಸೇನಾ ಠಾಣೆಯ ಸಮೀಪವಿರುವ ಕಾಡಿನ ಕಡೆಗೆ ಓಡಿಹೋದರು ಎಂಬ ಮಾಹಿತಿ ಎಫ್‍ಐಆರ್(FIR) ನಲ್ಲಿ ದಾಖಲಿಸಲಾಗಿತ್ತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಅವರು ಸೇನಾ ಮುಖ್ಯಸ್ಥ ಜನರಲ್ (Army Chief General) ಮನೋಜ್ ಪಾಂಡೆ ಅವರಿಂದ ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ – ಪೊಲಿಟಿಕಲ್ ಸೂಸೈಡ್ ಎಂದ ಸುಧಾಕರ್