ರಾಯಚೂರು: ರಾಜ್ಯದ ಶೇಕಡಾ 45 ರಷ್ಟು ಭಾಗಕ್ಕೆ ಬೆಳಕು ನೀಡುವ ರಾಯಚೂರು ಜಿಲ್ಲೆ ಈಗ ಸೋಲಾರ್ ವ್ಯವಸ್ಥೆಯಿಂದ ಹೊಸದೊಂದು ಮೈಲಿಗಲ್ಲು ಇಡಲು ಸಜ್ಜಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಹೊಸ ಬೆಳಕು ಮೂಡುತ್ತಿದೆ. ಖಾಸಗಿ ಕಂಪನಿಗಳ ಇಚ್ಚಾಶಕ್ತಿಯಿಂದ ಜಿಲ್ಲೆಯ ಪ್ರತಿಯೊಂದು ಸರ್ಕಾರಿ ಆರೋಗ್ಯ ಕೇಂದ್ರಗಳು ಇದೀಗ ಸೋಲಾರ್‍ಮಯವಾಗಿವೆ.
ಸರ್ಕಾರಿ ಆಸ್ಪತ್ರೆಗಳು ,ಆರೋಗ್ಯ ಕೇಂದ್ರಗಳು ಎಂದರೆ ನಾನಾ ಸಮಸ್ಯೆಗಳ ಆಗರ. ವೈದ್ಯರ ಸಮಸ್ಯೆ, ಸಿಬ್ಬಂದಿ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳು ಇರುತ್ತವೆ. ಇದರಲ್ಲಿ ವಿದ್ಯುತ್ ಸಮಸ್ಯೆ ಕೂಡ ಮುಖ್ಯವಾಗಿದೆ. ಹೀಗಾಗಿಯೇ ಸೆಲ್ಕೋ ಫೌಂಡೇಶನ್ ಸಂಸ್ಥೆ ಕ್ರಿಪ್ಟೋ ರಿಲೀಫ್ ಸಂಸ್ಥೆ ಸಹಯೋಗದೊಂದಿದೆ ಹೊಸಹೆಜ್ಜೆಯನ್ನ ಇಟ್ಟಿದೆ.
Advertisement
ರಾಯಚೂರು ಜಿಲ್ಲೆಯ 4 ತಾಲೂಕು ಆಸ್ಪತ್ರೆ, 1 ಹೆರಿಗೆ ಆಸ್ಪತ್ರೆ, 50 ಪ್ರಾಥಮಿಕ ಆರೋಗ್ಯ ಕೇಂದ್ರ, 6 ಸಮುದಾಯ ಆರೋಗ್ಯ ಕೇಂದ್ರ, 191 ಆರೋಗ್ಯ ಉಪಕೇಂದ್ರ ಸೇರಿದಂತೆ ಒಟ್ಟು 252 ವಿವಿಧ ಹಂತಗಳ ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್ ಅಳವಡಿಸಲಾಗಿದೆ. ಇದನ್ನೂ ಓದಿ: ಅಂಗನವಾಡಿ ಸಿಬ್ಬಂದಿಗೆ ಕನಿಷ್ಠ ವೇತನದ ಕೂಗಿನ ನಡುವೆ ಶುರುವಾಗಿದೆ ಮೊಟ್ಟೆ ಕಿರಿಕಿರಿ
Advertisement
Advertisement
ದಿನದ 24 ಗಂಟೆಯೂ ವಿದ್ಯುತ್ ಸಮಸ್ಯೆಯಾಗದಂತೆ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ವಿದ್ಯುತ್ ಇಲ್ಲದೆ ರೋಗಿಗಳು ಪರದಾಡುವುದು ಇನ್ನೂ ತಪ್ಪಲಿದೆ. ರೆಫ್ರಿಜರೇಟರ್, ಲೈಟ್, ಫ್ಯಾನ್, ಎಸಿ ಸೇರಿದಂತೆ ಆಸ್ಪತ್ರೆಯಲ್ಲಿನ ಪ್ರತಿಯೊಂದು ಎಲೆಕ್ಟ್ರಿಕಲ್ ಉಪಕರಣಗಳು ದಿನಪೂರ್ತಿ ಕೆಲಸ ಮಾಡಲಿವೆ.
Advertisement
ಹಿಂದುಳಿದ ಮಹತ್ವಾಕಾಂಕ್ಷೆ ಜಿಲ್ಲೆಗಳಾದ ರಾಯಚೂರು, ಯಾದಗಿರಿಯನ್ನ ಪೈಲೆಟ್ ಪ್ರೋಗ್ರಾಂಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು. ರಾಜ್ಯದಲ್ಲೇ ಪ್ರಥಮವಾಗಿ ರಾಯಚೂರು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ಜಿಲ್ಲೆಯ ಜನ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಸರ್ಕಾರಿ ಸೇವೆಗೆ ಸೇರಿದ ಪ್ರದೀಪ್ ಪತ್ನಿ
ಆರೋಗ್ಯ ಕೇಂದ್ರಗಳಿಗೆ ಸೋಲಾರ್ ವ್ಯವಸ್ಥೆ ಅಳವಡಿಸಿರುವುದರಿಂದ ವಿದ್ಯುತ್ ಬಿಲ್‍ನಲ್ಲಿ ಶೇಕಡಾ 70 ರಷ್ಟು ಕಡಿತವಾಗಲಿದೆ. ಶೌರಶಕ್ತಿ ಮಾಲಿನ್ಯ ರಹಿತ ವಿದ್ಯುತ್ ಮೂಲ ಆಗಿರುವುದರಿಂದ ಜನರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವುದಿಲ್ಲ. ಎಂತದ್ದೇ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಬಾರದು ಎಂದು ತಾಲ್ಲೂಕು ಆರೋಗ್ಯ ಕೇಂದ್ರಗಳಿಗೆ 64 ಕೆ.ವಿ. ಇನ್ವರ್ಟರ್, ಸಮುದಾಯ ಆರೋಗ್ಯ ಕೇಂದ್ರಗಳಿಗೆ 20 ಕೆ.ವಿ., ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 10 ಕೆ.ವಿ ಹಾಗೂ ಉಪ ಆರೋಗ್ಯ ಕೇಂದ್ರಗಳಿಗೆ 2 ಕೆ.ವಿ ಇನ್ವರ್ಟರ್ ಅಳವಡಿಸಲಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಬ್ಯಾಟರಿಗಳನ್ನ ಬಳಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳು, ಗ್ರಾಮೀಣ ಭಾಗದಲ್ಲಿನ ಆರೋಗ್ಯ ಕೇಂದ್ರಗಳು ಎಂದರೆ ಮೂಗು ಮುರಿಯುವ ಜನ ಆಸ್ಪತ್ರೆಗಳಿಗೆ ಬರಬೇಕು ಎನ್ನುವುದು ಈ ಯೋಜನೆಯ ಉದ್ದೇಶ. ಸೋಲಾರ್ ವ್ಯವಸ್ಥೆ ಅಳವಡಿಸಿದ ಮಾತ್ರಕ್ಕೆ ಎಲ್ಲವೂ ಸರಿಹೋಗುವುದಿಲ್ಲ, ವ್ಯವಸ್ಥೆಯ ನಿರ್ವಹಣೆ ಹಾಗೂ ಸಮರ್ಪಕ ಬಳಕೆ ಮುಖ್ಯ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಿಲ್ಲೆಗೆ ಸಿಕ್ಕಿರುವ ಸೌಲಭ್ಯವನ್ನ ಸರಿಯಾಗಿ ಬಳಸಿಕೊಳ್ಳಬೇಕಿದೆ.