ರಾಯಚೂರು: ಜಿಲ್ಲೆಯಲ್ಲಿ ಹಲವೆಡೆ ಮೋಡ ಕವಿದ ವಾತಾವರಣದ ಮಧ್ಯೆಯೂ ಸೂರ್ಯ ಗ್ರಹಣ ಗೋಚರಿಸಿದೆ. ನಗರದ ಅಂಬೇಡ್ಕರ್ ವೃತ್ತ, ವಿಜ್ಞಾನ ಕೇಂದ್ರ, ಮಾವಿನಕೆರೆ ಸೇರಿ ಹಲವೆಡೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಅಂಬೇಡ್ಕರ್ ವೃತ್ತದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸೇರಿ ವಿವಿಧ ಸಂಸ್ಥೆಗಳು ಗ್ರಹಣ ವೀಕ್ಷಣೆಗೆ ಸೌರ ಕನ್ನಡಕ, ಟೆಲಿಸ್ಕೋಪ್ ವ್ಯವಸ್ಥೆ ಮಾಡಿದ್ದವು. ಜೊತೆಗೆ ಗ್ರಹಣ ವೇಳೆ ಮೂಢನಂಬಿಕೆ ಆಚರಣೆ ಬೇಡ ಅಂತ ಸಾರ್ವಜನಿಕರಿಗೆ ಫಲಾಹಾರ ನೀಡಿದರು.
Advertisement
Advertisement
ಗ್ರಹಣದ ಬಗ್ಗೆ ಸಂಪೂರ್ಣ ಮಾಹಿತಿಯಿರುವ ಫ್ಲೆಕ್ಸ್ ಗಳನ್ನ ಹಾಕಿ ಜನರಿಗೆ ಮಾಹಿತಿ ನೀಡಲಾಯಿತು. ನೇರವಾಗಿ ಸೂರ್ಯಗ್ರಹಣ ವೀಕ್ಷಿಸಬಾರದು ಅಂತ ಟಿವಿ ಪರದೆ ಮೇಲೆ ಗ್ರಹಣದ ದೃಶ್ಯಗಳನ್ನು ತೋರಿಸಲಾಯಿತು.
Advertisement
ಮೋಡಕವಿದ ವಾತಾವರಣವಿದ್ದರಿಂದ 10 ಗಂಟೆಯ ವೇಳೆಗೆ ಗ್ರಹಣ ಗೋಚರವಾಯಿತು. ಗ್ರಹಣ ವೀಕ್ಷಣೆ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಿ.ಬಿ ವೇದಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.