ಬೆಂಗಳೂರು: ಡಿಸೆಂಬರ್ 26ರಂದು ಅಪರೂಪದ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಜ್ಯೋತಿಷಿಗಳ ಪ್ರಕಾರ ಅತ್ಯಂತ ಅಪಾಯಕಾರಿ ಸೂರ್ಯ ಗ್ರಹಣ ಇದಾಗಿದ್ದು ಎಲ್ಲ ದ್ವಾದಶ ರಾಶಿಗಳು ಸೂರ್ಯ ಗ್ರಹಣದ ಪರಿಣಾಮ ಬೀಳಲಿದೆ. ಅಂದು ಬೆಳಗ್ಗೆ 7 ಗಂಟೆಗೆ ದೇವಾಲಯಗಳು ಬಂದ್ ಆಗಲಿದೆ. ಬೆಂಗಳೂರು ಭಾಗದಲ್ಲಿ ಬೆಳಗ್ಗೆ 8.05 ರಿಂದ 11.04 ರವರೆಗೂ ಗ್ರಹಣ ಸಂಭವಿಸಲಿದೆ.
ಪೂರ್ವಾಷಾಢ, ಅನುರಾಧ, ಜ್ಯೇಷ್ಠ, ಮೂಲ, ಮಖ ನಕ್ಷತ್ರ ಹಾಗೂ ಧನುರ್, ಮಕರ, ವೃಶ್ಚಿಕ ರಾಶಿಯವರಿಗೆ ಗ್ರಹಣ ಸಂಭವದ ವೇಳೆ ಹೆಚ್ಚು ಪ್ರಭಾವ ಬೀಳಲಿದೆ. ಸೂರ್ಯನಿಗೆ ಹತ್ತಿರವಿರುವ ನಕ್ಷತ್ರಗಳು ಅಪಾಯಕ್ಕೆ ಹತ್ತಿರವಿದ್ದು, ಅವಘಡಗಳಿಂದ ದೂರವಿರಲು ನದಿ ಸ್ನಾನ ಪೂಜೆ ಮುಖ್ಯವಾಗಿದೆ. ಬೆಂಕಿ ಅವಘಡಗಳು ಸಂಭವಿಸುವ ಸನ್ನಿವೇಶ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ವಿಶೇಷ ಪೂಜೆ ಸಲ್ಲಿಸಬೇಕೆಂದು ಜ್ಯೋತಿಷ್ಯರು ಹೇಳಿದ್ದಾರೆ. ಇದನ್ನೂ ಓದಿ: ಸೂರ್ಯಗ್ರಹಣ: ರಾಷ್ಟ್ರದ ಗಮನ ಸೆಳೆದ ಕೊಡಗಿನ ಪುಟ್ಟ ಗ್ರಾಮ
Advertisement
ದರ್ಬೆ ಹಾಕಿ ದೋಷದಿಂದ ದೂರವಿರಲು ಪ್ರಯತ್ನ ಮಾಡಬಹುದಾಗಿದೆ. ದೇವಾಲಯ ದೇವರ ದರ್ಶನ ಮುಖ್ಯವಾಗಿದೆ. ಗರ್ಭಿಣಿಯರು ಗ್ರಹಣ ಕಾಲ ಹೊರಬರುವಂತಿಲ್ಲ. ಶಾಂತಿ ಹೋಮ ಮಾಡಲು ಆಗದವರು ತಮ್ಮ ಶಕ್ತಿಗನುಸಾರವಾಗಿ ಗೋಧಿ ಮತ್ತು ಎಣ್ಣೆಯನ್ನು ದೇವಾಲಯದಲ್ಲಿ ದಾನ ನೀಡಬಹುದು.
Advertisement