ಗದಗ: ಇಂದು ಅಪರೂಪದ ಕಂಕಣಾಕೃತಿ ಸೂರ್ಯಗ್ರಹಣ ಇರುವ ಹಿನ್ನೆಲೆ ಗದಗ ಜಿಲ್ಲೆಯಲ್ಲಿನ ಐತಿಹಾಸ ಪ್ರಸಿದ್ಧ ದೇವಸ್ಥಾನಗಳಾದ ತ್ರಿಕೂಟೇಶ್ವರ, ಸೂರ್ಯನಾರಾಯಣ, ವೀರನಾರಾಯಣ, ಸಾವಿತ್ರಿ-ಗಾಯತ್ರಿ-ಸಾವಿತ್ರಿ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಪೂಜೆ ಆರಂಭವಾಗಿವೆ.
ಗದಗನಲ್ಲಿ ಗ್ರಹಣ ಗೋಚರವಾಗುವ ಸಮಯ ಬೆಳಗ್ಗೆ 8 ಗಂಟೆ 5 ನಿಮಿಷ, ಮಧ್ಯಕಾಲ 9 ಗಂಟೆ 25 ನಿಮಿಷ ಇನ್ನು ಮೋಕ್ಷಕಾಲ 11 ಗಂಟೆ 4 ನಿಮಿಷವರೆಗೆ ಇದೆ. ಈ ಸಮಯದಲ್ಲಿ ದೇವರುಗಳಿಗೆ ಕೇವಲ ಜಲಾಭಿಷೇಕ ನಡೆಯಲಿವೆ. ಗ್ರಹಣ ಸಂದರ್ಭದಲ್ಲಿ ದೇವಸ್ಥಾನಗಳು ಬಂದ್ ಮಾಡಲ್ಲ. ಗ್ರಹಣ ಮೋಕ್ಷ ಕಾಲ ನಂತರ ಪುಷ್ಕರಣಿಯಿಂದ ಜಲತಂದು ವಿಶೇಷವಾಗಿ ಜಲಾಭಿಷೇಕ, ಪಂಚಾಮೃತ, ಕ್ಷೀರಾಭಿಷೇಕ, ಎಳೆನೀರು ಸೇರಿದಂತೆ ಹೋಮ-ಹವನಗಳು ನಡೆಯುತ್ತಿವೆ.
Advertisement
Advertisement
ಇನ್ನು ಅಶುಭ ಫಲ, ಮಧ್ಯಫಲ ಇರುವವರು ಗ್ರಹಣ ಸಂದರ್ಭದಲ್ಲಿ ಯಾವುದೇ ಉಪಹಾರ ನೀರು ಸೇವನೆ ಮಾಡಬಾರದು. ಗ್ರಹಣ ಮೋಕ್ಷ ನಂತರ ತೀರ್ಥ ಪ್ರಸಾದ ಸ್ವೀಕರಿಸುವುದು ಒಳಿತು ಎಂದು ತ್ರಿಕೂಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ ಭಟ್ಟರು ಪಬ್ಲಿಕ್ ಟಿವಿಗೆ ತಿಳಿಸಿದರು.