ಬೇಸಿಗೆ ಬಂದ ತಕ್ಷಣ ಜನರು ಹೆಚ್ಚು ದ್ರವ ರೂಪದ ಆಹಾರ ಸವಿಯಲು ಇಷ್ಟಪಡುತ್ತಾರೆ. ಅದರಲ್ಲಿ ‘ಕೋಕಮ್ ಡ್ರಿಂಕ್’ ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿಡಲು ತುಂಬಾ ಸಹಾಯ ಮಾಡುತ್ತೆ. ಈ ‘ಸೋಲ್ ಕಡಿ’ಗೆ ಕೋಕಮ್ ಮತ್ತು ತೆಂಗಿನ ಹಾಲನ್ನು ಬಳಸುವುದರಿಂದ ದೇಹಕ್ಕೆ ತುಂಬಾ ಉತ್ತಮವಾಗಿರುತ್ತೆ.
ಬೇಕಾಗುವ ಸಾಮಾಗ್ರಿಗಳು:
* ಕೋಕಮ್ ಅಥವಾ ಅಮ್ಸೋಲ್ – 6-8
* ತೆಂಗಿನಕಾಯಿ ತುರಿ – 1 ಕಪ್
* ಬಿಸಿನೀರು – 1 ಕಪ್
* ಲವಂಗ – 2
* ಬೆಳ್ಳುಳ್ಳಿ – 1 ಟೀ ಸ್ಪೂನ್
* ಶುಂಠಿ – 1 ಟೀ ಸ್ಪೂನ್
* ಹಸಿರು ಮೆಣಸಿನಕಾಯಿ – 1-2
* ಇಂಗು – ಒಂದು ಚಿಟಿಕೆ
* ರುಚಿಗೆ ಉಪ್ಪು, ಅಲಂಕರಿಸಲು ಕೊತ್ತಂಬರಿ ಸೊಪ್ಪು ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್
Advertisement
Advertisement
ಮಾಡುವ ವಿಧಾನ:
* ಇಂಗು ಮತ್ತು ಉಪ್ಪನ್ನು ಸೇರಿಸಿ ಸುಮಾರು 3 ರಿಂದ 4 ಕಪ್ ನೀರಿನಲ್ಲಿ ಕೋಕಮ್ ಅನ್ನು ನೆನೆಸಿ.
* 3 – 4 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ.
* ತುರಿದ ತೆಂಗಿನಕಾಯಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಯನ್ನು ಸ್ವಲ್ಪ ನೀರಿನೊಂದಿಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
Advertisement
Advertisement
* ರುಬ್ಬಿದ ಪೇಸ್ಟ್‍ನಿಂದ ‘ಹಾಲನ್ನು’ ಹಿಂಡಿ, 3 ರಿಂದ 4 ನೇ ಕಪ್ ನೀರನ್ನು ಸೇರಿಸಿ.
* ನೀರಿನಿಂದ ಕೋಕಮ್ ತೆಗೆದು ಅದಕ್ಕೆ ಪೇಸ್ಟ್‍ನಿಂದ ಹಿಡಿದ ಹಾಲಿನ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
* ಕೊನೆಯದಾಗಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇದನ್ನೂ ಓದಿ: ನಾಲಿಗೆ ರುಚಿ ಹೆಚ್ಚಿಸುವ ಸ್ವೀಟ್ ಕಾರ್ನ್ ಫ್ರೈಡ್ ರೈಸ್