ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಜೀವ ಬೆದರಿಕೆ ಪ್ರಕರಣ ಹಿನ್ನೆಲೆ ರಾಯಚೂರಿನ ಮಾನ್ವಿಯಲ್ಲಿ ಮುಂಬೈ ಪೊಲೀಸರು ಆರೋಪಿ ಯುವಕನನ್ನ ಬಂಧಿಸಿ ಕರೆದೊಯ್ದಿದ್ದಾರೆ. ಮಾನ್ವಿಯಲ್ಲಿ ಟೈಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೋಹೆಲ್ ಪಾಷಾ (Sohail Pasha) ಬಂಧಿತ ಆರೋಪಿ.
ನವೆಂಬರ್ 11ರಂದು ಆರೋಪಿಯನ್ನ ಬಂಧಿಸಿ ಮುಂಬೈಗೆ ಕರೆದೊಯ್ಯಲಾಗಿದೆ. ಮುಂಬೈ ವರ್ಲಿ ಪೊಲೀಸ್ ಠಾಣೆಯಿಂದ ಆರೋಪಿ ಪೋಷಕರಿಗೆ ಇಂದು ಕರೆ ಬಂದಿದ್ದು ವಿಚಾರಣೆಗೆ ಮುಂಬೈಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಇದೀಗ ಮಗನ ಬಂಧನದಿಂದ ಬಡ ಕುಟುಂಬ ಕಣ್ಣೀರಿಡುತ್ತಿದೆ. ಇದನ್ನೂ ಓದಿ:`ದಾಸವರೇಣ್ಯ ಶ್ರೀ ವಿಜಯ ದಾಸರು 2′ ಚಿತ್ರಕ್ಕೆ ಚಾಲನೆ
ಸಲ್ಮಾನ್ ಖಾನ್ ಅಪ್ಪಟ ಅಭಿಮಾನಿಯಾಗಿದ್ದ ಸೋಹೆಲ್ ಪಾಶಾ, ಬಹುಬೇಗ ಹೆಸರು ಮಾಡಲು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಲ್ಲಿ ಬೆದರಿಕೆ ಹಾಕಿದ್ದ. ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿ ವಾಟ್ಸ್ಆಪ್ ನಂಬರ್‌ಗೆ ನ.7ರಂದು ಕೊಲೆ ಬೆದರಿಕೆ ಮೆಸೇಜ್ ಮಾಡಿದ್ದ, 5 ಕೋಟಿ ಬೇಡಿಕೆ ಇಟ್ಟಿದ್ದ. ಬೇರೆಯವರ ಮೊಬೈಲ್ ನಂಬರ್ ಬಳಸಿ ವಾಟ್ಸ್ ಆಪ್ ಮೆಸೇಜ್ ಮಾಡಿದ್ದ ಸೋಹೆಲ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಮಗ ಮಾಡಿದ ತಪ್ಪಿಗೆ ಪೋಷಕರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಎಂಟನೇ ತರಗತಿ ಓದಿದ್ದ ಸೋಹೆಲ್ ಪಾಷಾ ಹಿಂದಿ ಹಾಡುಗಳನ್ನ ಬರೆಯುತ್ತಿದ್ದರು. ಸಲ್ಮಾನ್ ಖಾನ್ ಕುರಿತಾಗಿಯೂ ಹಾಡು ಬರೆದಿದ್ದ ಅವರ ಅಭಿಮಾನಿಯಾಗಿದ್ದ ಇದೀಗ ಕೊಲೆ ಬೆದರಿಕೆ ಆರೋಪದಲ್ಲಿ ಸೋಹೆಲ್ ಪೊಲೀಸರ ಅತಿಥಿಯಾಗಿದ್ದಾನೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನ ಹುಡುಕಾಟ ನಡೆಸಿದ್ದ ಮುಂಬೈ ಪೊಲೀಸರು ಆರೋಪಿಯನ್ನ ಬಂಧಿಸಿ ಕರೆದೊಯ್ದಿದ್ದಾರೆ.