ಹಾಸನ: ಹೃದಯಘಾತದಿಂದ ಸಾಫ್ಟ್‌ವೇರ್ ಇಂಜಿನಿಯರ್ (Heart Attack) ಸಾವನ್ನಪ್ಪಿರುವ ಘಟನೆ ಸಕಲೇಶಪುರ (Sakleshpur) ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಮರ್ಥ್ (26) ಮೃತ ಸಾಫ್ಟ್‌ವೇರ್ ಇಂಜಿನಿಯರ್. ಕಾಫಿ ಬೆಳೆಗಾರ ಹೇಮಂತ್ ಹಾಗೂ ಸರಳ ಎಂಬುವವರ ಪುತ್ರ ಸಮರ್ಥ್ ಬೆಂಗಳೂರಿನಲ್ಲಿ (Bengaluru) ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಕೆಲ ತಿಂಗಳುಗಳಿಂದ (ವರ್ಕ್ ಫ್ರಂ ಹೋಂ) ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಸಮರ್ಥ್ ಭಾನುವಾರ ಬೆಳಗ್ಗೆಯವರೆಗೂ ಕೆಲಸ ಮಾಡಿ ಮಲಗಿದ್ದರು. ಸಂಜೆ ಮೇಲೆದ್ದು ನೀರು ಕುಡಿದ ಸಮರ್ಥ್ ತಕ್ಷಣವೇ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ: ಆದಿತ್ಯ ಠಾಕ್ರೆ ಕಿರಿಕ್
ಕೂಡಲೇ ಸಮರ್ಥ್ ತಾಯಿ ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು ಮನೆಗೆ ಬಂದ ವೈದ್ಯರು ಸಮರ್ಥ್ ತಪಾಸಣೆ ನಡೆಸಿದ್ದಾರೆ. ಅಷ್ಟರಲ್ಲಿ ಹೃದಯಾಘಾತದಿಂದ ಸಮರ್ಥ್ ಕೊನೆಯುಸಿರೆಳೆದಿದ್ದರು. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.